ಪ್ರಮುಖ ಸುದ್ದಿ

ಮುಂಬೈನಿಂದ ಬಂದವರಿಂದ ಸುಳ್ಳು ಮಾಹಿತಿ : ದಂಪತಿ ವಿರುದ್ಧ ಪ್ರಕರಣ ದಾಖಲು

ರಾಜ್ಯ( ಮಡಿಕೇರಿ) ಮೇ 20:- ಮುಂಬೈನಿಂದ ಬಂದಿದ್ದರೂ, ತಾನು ಬೆಂಗಳೂರಿನಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೂರ್ನಾಡು ಸಮೀಪದ ಎಂ.ಬಾಡಗ ಗ್ರಾಮದ ಕೆ.ಕೆ.ಬೋಪಣ್ಣ ಹಾಗೂ ಅವರ ಪತ್ನಿ ಪೊನ್ನಮ್ಮ ಅವರು ವಿರುದ್ಧ ಲಾಕ್‍ಡೌನ್ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಎಂ.ಬಾಡಗ ಗ್ರಾಮದ ನಿವಾಸಿಗಳಾದ ಬೋಪಣ್ಣ ಹಾಗೂ ಪೊನ್ನಮ್ಮ ಮುಂಬೈನಿಂದ ಬೆಂಗಳೂರು ಮತ್ತು ಅಲ್ಲಿಂದ ಕುಶಾಲನಗರ ಮಾರ್ಗವಾಗಿ ಕೊಡಗಿಗೆ ಆಗಮಿಸಿದ್ದರೆನ್ನಲಾಗಿದೆ. ಅದರೆ ಕುಶಾಲನಗರದ ತಪಾಸಣಾ ಕೇಂದ್ರದಲ್ಲಿ ತಾವು ಬೆಂಗಳೂರಿನಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಮಾಹಿತಿ ದೊರೆತ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಚಂದ್ರಮೌಳಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಹಾಗೂ ವೃತ್ತ ನಿರೀಕ್ಷಕ ಸಿ.ಎನ್.ದಿವಾಕರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್ ಅವರು ಬೋಪಣ್ಣ ಹಾಗೂ ಪೊನ್ನಮ್ಮ ಅವರ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ಹಾಗೂ 52 ಡಿಎಂಎ ಆಕ್ಟ್-2005ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಲ್ಲದೆ ಅವರಿಬ್ಬರನ್ನು ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: