
ಪ್ರಮುಖ ಸುದ್ದಿ
ಮಡಿಕೇರಿಯಿಂದ ಹೊರ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭ
ರಾಜ್ಯ( ಮಡಿಕೇರಿ) ಮೇ 20 :- ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿದ್ದು, ಹಿನ್ನೆಲೆ ಬಸ್ಗಳ ಸಂಚಾರಕ್ಕೆ ಅವಕಾಶ ಮಾಡಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಮಡಿಕೇರಿಯಿಂದ ಪುತ್ತೂರಿಗೆ 2 ಬಸ್, ಮಡಿಕೇರಿಯಿಂದ ಕುಶಾಲನಗರ ಮಾರ್ಗ ಮೈಸೂರಿಗೆ 2 ಬಸ್, ಮಡಿಕೇರಿ ವಿರಾಜಪೇಟೆ ಮಾರ್ಗ ಮೈಸೂರಿಗೆ 2 ಬಸ್, ಮಡಿಕೇರಿ ಕುಶಾಲನಗರ ಮಾರ್ಗ ಬೆಂಗಳೂರಿಗೆ 4 ಬಸ್ ಸಂಚಾರಕ್ಕೆ ಅವಕಾಶ ಮಾಡಲಾಗಿದೆ ಎಂದು ಮಡಿಕೇರಿ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕರಾದ ಗೀತಾ ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಸ್ಪಂದನೆ ನೋಡಿಕೊಂಡು ಸರ್ಕಾರದ ನಿರ್ದೇಶನದಂತೆ ಬಸ್ ಸಂಚಾರ ಬಸ್ ಸಂಚಾರಕ್ಕೆ ಅವಕಾಶ ಮಾಡಲಾಗುವುದು. ಬಸ್ ಹತ್ತುವ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. (ಕೆಸಿಐ,ಎಸ್.ಎಚ್)