ಕ್ರೀಡೆ

 ಬೆಂಗಳೂರಿನಲ್ಲಿ  ನಡೆದ ಪಂದ್ಯದಿಂದಲೇ ನನಗೆ ‘ಹಿಟ್ ಮ್ಯಾನ್’ ಹೆಸರು :  ರಹಸ್ಯ ತೆರೆದಿರಿಸಿದ  ರೋಹಿತ್ ಶರ್ಮಾ

ದೇಶ(ನವದೆಹಲಿ)ಮೇ.20:-   ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲ, ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಯಾರಾದರೂ  ಸ್ಫೋಟಕ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಹೊಂದಿದ್ದರೆ ಅದು ರೋಹಿತ್ ಶರ್ಮಾ.

ಟೀಮ್ ಇಂಡಿಯಾದ ಬ್ಯಾಟಿಂಗ್ ಓಪನಿಂಗ್ ಬ್ಯಾಟ್ಸ್‌ಮನ್ ಸಿಕ್ಸರ್‌ಗಳ ಬ್ಯಾರೇಜ್  ಆಗಿರುವ ಇವರನ್ನು ಜನರು  ‘ಹಿಟ್‌ಮ್ಯಾನ್’ ಎಂದು ಕರೆಯುತ್ತಾರೆ, ಆದರೆ ರೋಹಿತ್ ಶರ್ಮಾ ಅವರಿಗೆ ಈ  ಹೆಸರು ಹೇಗೆ ನಂತು ಎಂದು ನಿಮಗೆ ತಿಳಿದಿದೆಯೇ? ರೋಹಿತ್ ಶರ್ಮಾ ಅವರು ಸ್ವತಃ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಟೀಮ್ ಇಂಡಿಯಾದ   ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಈ ರಹಸ್ಯವನ್ನು ತೆರೆದಿರಿಸಿದ್ದಾರೆ.

ವಾಸ್ತವದಲ್ಲಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಸಿಲುಕಿಕೊಂಡಿದ್ದ ಅಶ್ವಿನ್, ಇನ್‌ಸ್ಟಾಗ್ರಾಮ್‌ನಲ್ಲಿ ಟೀಮ್ ಇಂಡಿಯಾದ ಹಳೆಯ ಪ್ರಚಂಡ ಪಂದ್ಯಗಳ ಕುರಿತು ಸರಣಿ  ನಡೆಸುತ್ತಿದ್ದಾರೆ. ಅದೇ ವೇಳೆ ಅವರು ಆ ಪಂದ್ಯಗಳಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ ಭಾರತೀಯ ಕ್ರಿಕೆಟಿಗರೊಂದಿಗೆ ನೇರ ಸಂವಹನ ನಡೆಸುತ್ತಿದ್ದಾರೆ. ಅಶ್ವಿನ್ ಅವರ ಇತ್ತೀಚಿನ ಕಂತು 2013 ರ ಬೆಂಗಳೂರಿನಲ್ಲಿ ನಡೆದ ಸರಣಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಏಕದಿನ ಪಂದ್ಯ, ಇದರಲ್ಲಿ ರೋಹಿತ್ ಶರ್ಮಾ ತಮ್ಮ ಮೂರು ಏಕದಿನ ದ್ವಿಶತಕಗಳಲ್ಲಿ 209 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ಬಗ್ಗೆ ಚರ್ಚಿಸಲು ಅವರು ರೋಹಿತ್ ಶರ್ಮಾ ಅವರನ್ನು ಲೈವ್ ಗೆ ಕರೆದಿದ್ದರು. ಈ ಸಮಯದಲ್ಲಿ ಅವರಿಗೆ ರೋಹಿತ್  ಶರ್ಮಾ ಅವರಿಗೆ 209 ರನ್ ಪಡೆದಿದ್ದರಿಂದಲೇ ಹಿಟ್ ಮ್ಯಾನ್ ಎಂಬ ಹೆಸರು ಬಂತೆಂಬ ರಹಸ್ಯ ತಿಳಿದು ಬಂದಿದೆ.

“ಹಿಟ್ಮ್ಯಾನ್” ಹೆಸರನ್ನು ನೀವು ಹೇಗೆ ಪಡೆದುಕೊಂಡಿದ್ದೀರಿ ಎಂದು ಅಶ್ವಿನ್ ರೋಹಿತ್ ಅವರನ್ನು ಕೇಳಿದಾಗ, ಬೆಂಗಳೂರಿನಲ್ಲಿಯೇ 209 ರನ್ ಗಳಿಸಿದ ನಂತರ ತನಗೆ ಅದು ಸಿಕ್ಕಿತು ಎಂದು ರೋಹಿತ್ ಹೇಳಿದ್ದಾರೆ.

209 ರನ್ ಗಳಿಸಿ ನಾನು ಪೆವಿಲಿಯನ್‌ಗೆ ಮರಳಿದಾಗ ಕ್ರೀಡಾ ಚಾನೆಲ್‌ಗಳು ನನ್ನ ಸಂದರ್ಶನ ಮಾಡಲು ಬಯಸಿದ್ದು, ಮೀಡಿಯಾ ಮ್ಯಾನೇಜರ್ ಹೇಳಿದಾಗ, ನಾನು ತುಂಬಾ ದಣಿದಿದ್ದರಿಂದ ನಿರಾಕರಿಸಿದ್ದೆ. ಯಾವುದೇ ದಾಖಲೆ ಮಾಡಿದಲ್ಲಿ ನಾವು ಸಂದರ್ಶನ ನೀಡಬೇಕು, ಇಂದು ವಿಶ್ವಾದ್ಯಂತ ಪ್ರಸಾರವಾಗಲಿದೆ ಎಂದರು. ನಾನು ಇದನ್ನು ಒಪ್ಪಿಕೊಂಡೆ. ಅಲ್ಲಿ ಅವರು  ನೀವು ಹಿಟ್‌ಮ್ಯಾನ್‌ನಂತೆ ಆಡಿದ್ದೀರಿ ಎಂದು ಪದೇ ಪದೇ ಹೇಳಿದರು. ಹಿಟ್‌ಮ್ಯಾನ್‌ನಂತೆ ಸಿಕ್ಸರ್‌ಗಳನ್ನು ಹೊಡೆದಿರಿ ಎಂದರು.  ರವಿ ಭಾಯ್ (ರವಿಶಾಸ್ತ್ರಿ) ಕೂಡ ಅಲ್ಲಿಯೇ ನಿಂತಿದ್ದರು, ಅವರು ಹಿಟ್ಮ್ಯಾನ್ ಎಂಬ ಪದವನ್ನು ಗಮನಿಸಿ ಪ್ರೈಜ್  ವಿತರಣೆ ಮಾಡುತ್ತಿದ್ದಾಗ  ವೇದಿಕೆಯಿಂದ ನನ್ನನ್ನು ಪದೇ ಪದೇ ಹಿಟ್ ಮ್ಯಾನ್ ಹಿಟ್ ಮ್ಯಾನ್ ಎಂದೇ ಕರೆದರು. ಅಲ್ಲಿಂದಲೇ ಹಿಟ್ ಮ್ಯಾನ್ ಆರಂಭವಾಯಿತು ಎಂದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: