ಕ್ರೀಡೆ

ಪ್ರೀತಿಸಿದ ಹುಡುಗಿಯೇ ನನ್ನ ಜೀವನ ಸಂಗಾತಿಯಾಗಿ ಬಂದಿದ್ದು ಸಂತೋಷವಾಗಿದೆ : ಹೀಗೆ ಹೇಳಿದ್ದೇಕೆ ವೀರೇಂದ್ರ ಸೆಹ್ವಾಗ್

ದೇಶ(ನವದೆಹಲಿ)ಮೇ.20:- ಭಾರತದ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ವೀರು ತಮ್ಮ ದೇಶಕ್ಕಾಗಿ ಅದ್ಭುತ ಪ್ರದರ್ಶನ ನೀಡುವಾಗ ಅನೇಕ ಬಾರಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ವೇಳೆ ವೀರೇಂದ್ರ ಸೆಹ್ವಾಗ್ ಅವರ ಸ್ಫೋಟಕ ಬ್ಯಾಟಿಂಗ್ಗಾಗಿ ಮಾತ್ರವಲ್ಲದೆ ಅವರ ವೈಯುಕ್ತಿಕ ಜೀವನಕ್ಕೂ ಪ್ರಾಮುಖ್ಯತೆ ನೀಡಿದ್ದಾರೆ.  ಕ್ರಿಕೆಟ್ ಜಗತ್ತಿನಲ್ಲಿ ವೀರು ರಚಿಸಿದ ದಾಖಲೆಗಳ ಬಗ್ಗೆ ನೀವು ಹಲವು ಬಾರಿ ಕೇಳಿರಬಹುದು, ಆದರೆ ಇಂದು ನಾವು ಅವರ ಪ್ರೇಮಕಥೆಯ ಬಗ್ಗೆ ಹೇಳುತ್ತೇವೆ.

ಕ್ರೀಡಾಂಗಣದಲ್ಲಿ  ವೀರು ವೇಗವಾಗಿ ಎಷ್ಟು ರನ್ ತೆಗೆಯುತ್ತಾರೋ, ಅವರ ಪ್ರೇಮಕಥೆಯೂ ಅಷ್ಟೇ ನಿಧಾನವಾಗಿ ಸಾಗಿತ್ತು.  ಅವರು ಯಾವ ಹುಡುಗಿಯನ್ನು ಪ್ರೀತಿಸಿದ್ದರೋ, ಇಂದು ಅವರು ವೀರೆಂದ್ರ ಸೆಹ್ವಾಗ್ ಪತ್ನಿಯಾಗಿದ್ದಾರೆ. ಅವರ ಹೆಸರಿ ಆರತಿ ಅಹ್ಲಾವತ್.   ಆರತಿ ಮತ್ತು ವೀರು ಅವರ ಸ್ನೇಹವು 17 ವರ್ಷಗಳಾಗಿದ್ದು, ಪ್ರೀತಿಯಾಗಿ ಪರಿವರ್ತನೆಯಾಗಲು  14 ವರ್ಷಗಳೇ ಬೇಕಾಯಿತಂತೆ.

ವೀರೇಂದ್ರ ಸೇಹ್ವಾಗ್  ಮೊದಲ ಬಾರಿಗೆ ಆರತಿಯನ್ನು ಭೇಟಿಯಾದಾಗ  ಅವರ ವಯಸ್ಸು ಕೇವಲ 7 ವರ್ಷ, ಆರತಿಗೆ 5 ವರ್ಷ. 1980 ರಲ್ಲಿ ವೀರು ಅವರ ಸೋದರಸಂಬಂಧಿ ವಿವಾಹದಲ್ಲಿ ಇಬ್ಬರು ಭೇಟಿಯಾಗಿದ್ದರಂತೆ.  ಅವರ ಸೋದರ ಸಂಬಂಧಿ ಮದುವೆಯಾದ ಹುಡುಗಿ ಆರತಿ ಅಹ್ಲಾವತ್ ಅವರ ಚಿಕ್ಕಮ್ಮ. ಆ ಮದುವೆಯಲ್ಲಿ ಇಬ್ಬರೂ  ಸಮಯ ಕಳೆದಿದ್ದರು, ಮೋಜು ಮಸ್ತಿಯಲ್ಲಿ ತೊಡಗಿದ್ದರು.

ಇಬ್ಬರು ಪ್ರಬುದ್ಧರಾಗುತ್ತಿದ್ದಂತೆ ಅವರ ಸ್ನೇಹ ಪ್ರೀತಿಯಾಗಿ ಬದಲಾಯಿತು,   ವೀರೇಂದ್ರ ಅವರಿಗೆ 21 ವರ್ಷ ತುಂಬಿದಾಗ ಅವರು ಆರತಿಯಲ್ಲಿ ವಿವಾಹದ ಕುರಿತು  ಪ್ರಸ್ತಾಪಿಸಿದರು. ಸಂಬಂಧಿಕರಾಗಿದ್ದರೂ ಕೂಡ ಮನೆಯಲ್ಲಿ ಒಮ್ಮೆಲೇ ವಿವಾಹಕ್ಕೆ ಒಪ್ಪಿಕೊಳ್ಳಲಿಲ್ಲ.   ಬೇಡ ಬೇಡ ಎನ್ನುತ್ತಲೇ ಇಬ್ಬರ ಕುಟುಂಬದವರೂ ವಿವಾಹಕ್ಕೆ ಕೊನೆಗೂ ಒಪ್ಪಿಗೆ ನೀಡಿದರು. 2004ರಲ್ಲಿ ಇಬ್ಬರು ವಿವಾಹವಾದರು.

ಮದುವೆಯ ನಂತರ ಸೆಹ್ವಾಗ್ ಸಂದರ್ಶನವೊಂದರಲ್ಲಿ ‘ನಾವು ನಿಕಟ ರಕ್ತಸಂಬಂಧಗಳಲ್ಲಿ ವಿವಾಹವಾಗಲ್ಲ.   ಅದಕ್ಕೆ ಪೋಷಕರು ಕೂಡ ಒಪ್ಪಿಗೆ ನೀಡಿರಲಿಲ್ಲ.  ಅದಕ್ಕಾಗಿಯೇ ಕುಟುಂಬದವರಿಗೆ ನಮ್ಮ ಮದುವೆಗೆ ಒಪ್ಪಿಗೆ ನೀಡಲು  ಸ್ವಲ್ಪ ಸಮಯ ಹಿಡಿಯಿತು.  ಈ ಮದುವೆಗೆ ಕುಟುಂಬದವರ ಮನವೊಲಿಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ ನಾನು ಪ್ರೀತಿಸಿದ ಹುಡುಗಿಯೇ ನನ್ನ ಜೀವನ ಸಂಗಾತಿಯಾಗಿ ಬಂದಿದ್ದಾಳೆ  ಅದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: