ಕ್ರೀಡೆ

  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಇಂದು ಪ್ರಸಿದ್ಧ ಟಿವಿ ನಿರೂಪಕಿ !

ದೇಶ(ನವದೆಹಲಿ)ಮೇ.20:-  ಅಂಜುಮ್ ಚೋಪ್ರಾ ಕ್ರಿಕೆಟ್ ಜಗತ್ತಿನಲ್ಲಿ ಪ್ರಸಿದ್ಧ ಹೆಸರು, ಅವರಿಂದು 43 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಅವರು ಜೀವನದಲ್ಲಿ  ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೇ ಟಿವಿಯ ಖ್ಯಾತ ನಿರೂಪಕಿಯೂ ಆಗಿದ್ದಾರೆ.

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 4 ಬಾರಿ ಮತ್ತು ಮಹಿಳಾ ಟಿ 20 ವಿಶ್ವಕಪ್‌ನಲ್ಲಿ 2 ಬಾರಿ ಭಾಗವಹಿಸಿದ್ದಾರೆ. ಅವರು ಫೆಬ್ರವರಿ 12, 1995 ರಂದು ಮೊದಲ ಏಕದಿನ ಪಂದ್ಯವನ್ನು ಆಡಿದರು, ನಂತರ ಅವರು ಹಿಂದಿರುಗಿ ನೋಡಲಿಲ್ಲ. ಅದೇ ವರ್ಷ ನವೆಂಬರ್ 17 ರಂದು ಮೊದಲ ಟೆಸ್ಟ್ ಪಂದ್ಯವನ್ನೂ ಆಡಿದರು. 2000 ರ ಮಹಿಳಾ ವಿಶ್ವಕಪ್‌ನಲ್ಲಿ ಅವರನ್ನು ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿ ನೇಮಕಗೊಂಡರು.

ಅಂಜುಮ್ 127 ಏಕದಿನ ಪಂದ್ಯಗಳಲ್ಲಿ 31.38 ರ ಸರಾಸರಿಯಲ್ಲಿ 2,856 ರನ್ ಗಳಿಸಿದ್ದಾರೆ, ಜೊತೆಗೆ 12 ಟೆಸ್ಟ್ ಪಂದ್ಯಗಳಲ್ಲಿ 30.44 ರ ಸರಾಸರಿಯಲ್ಲಿ 5444 ರನ್ ಗಳಿಸಿದ್ದಾರೆ. ಅವರು ಕೇವಲ 18 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಇದರಲ್ಲಿ ಅವರು 17.21 ಸರಾಸರಿಯಲ್ಲಿ 241 ರನ್ಗಳನ್ನು ತಮ್ಮ ಖಾತೆಗೆ ಸೇರಿಸಿದ್ದರು.

2002 ರಲ್ಲಿ, ಅವರನ್ನು ಮೊದಲ ಬಾರಿಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ನೇಮಿಸಲಾಯಿತು. ಅವರ ನಾಯಕತ್ವದಲ್ಲಿ, ಮಹಿಳಾ ತಂಡವು ಹೊರವಲಯದಲ್ಲಿ (ದಕ್ಷಿಣ ಆಫ್ರಿಕಾದಲ್ಲಿ) ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಗೆದ್ದಿತು. 2005 ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಫೈನಲ್‌ಗೆ ತಲುಪಿತು. ಈ ಪಂದ್ಯಾವಳಿಯಲ್ಲಿ ಅಂಜುಮ್ ಭಾರತ ಪರವಾಗಿ ಹೆಚ್ಚು ಸ್ಕೋರರ್ ಆಗಿದ್ದರು.

ಅಂಜುಂ ಅವರ ಯಶಸ್ಸಿಗೆ ಪ್ರಶಸ್ತಿಯೂ ಸಿಕ್ಕಿತು. 2007 ರಲ್ಲಿ ಅವರಿಗೆ ಭಾರತ ಸರ್ಕಾರ ‘ಅರ್ಜುನ ಪ್ರಶಸ್ತಿ’ ನೀಡಿತು. ಇದಲ್ಲದೆ  2014 ರಲ್ಲಿ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಲಾಯಿತು. ದೇಶೀಯ ಕ್ರಿಕೆಟ್‌ನಲ್ಲಿ ಅವರು ‘ಏರ್ ಇಂಡಿಯಾ’ ತಂಡದ ಪರವಾಗಿ ಆಡಿದ್ದರು. ಮೈದಾನದಲ್ಲಿ ರನ್ ಗಳಿಸುವುದರ ಹೊರತಾಗಿ, ಅವರು ನಿರೂಪಕಿ ಆಗಲು ಇಷ್ಟಪಟ್ಟರು.

ಅವರು ಟಿವಿ ನಿರೂಪಕರಾಗಿ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಅವರು ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮೊದಲೇ ಟಿವಿ ಸ್ಟುಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು.  ಇಂದು ಅವರು ಸಂಪೂರ್ಣ ಟಿವಿ ನಿರೂಪಕರಾಗಿದ್ದಾರೆ. 2017 ರಲ್ಲಿ, ಫಿರೋಜ್ ಷಾ ಕೋಟ್ಲಾ ಮೈದಾನದ ಗೇಟ್ ನಂ -3 ಮತ್ತು 4ಕ್ಕೆ  ಅಂಜುಮ್ ಚೋಪ್ರಾ ಅವರ ಹೆಸರನ್ನು ಇಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: