ಮನರಂಜನೆ

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಚಿಕಿತ್ಸೆಗೆ ಹಣವಿಲ್ಲ : ಸಹಾಯಕ್ಕೆ ಬಂದ ಹನ್ಸಲ್ ಮೆಹ್ತಾ

ದೇಶ(ನವದೆಹಲಿ)ಮೇ.20:-  ಜನಪ್ರಿಯ ಟಿವಿ ನಟ ಆಶಿಶ್ ರಾಯ್   ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶಿಶ್ ಅವರ ಡಯಾಲಿಸಿಸ್ ನಡೆಯುತ್ತಿದೆ ಏತನ್ಮಧ್ಯೆ  ಅವರು ಫೇಸ್‌ಬುಕ್‌ನಲ್ಲಿ ಆರ್ಥಿಕ ಸಹಾಯವನ್ನು ಕೇಳಿದ್ದಾರೆ. ‘ಡಯಾಲಿಸಿಸ್‌ಗೆ ನಿಮ್ಮಿಂದ ಆರ್ಥಿಕ ಸಹಾಯಬೇಕು ಹಣ ಬೇಕು’ ಎಂದು ಆಶಿಶ್ ಭಾನುವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನಾನು ಐಸಿಯುನಲ್ಲಿದ್ದೇನೆ.ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಬರೆದಿದ್ದಾರೆ. ಆಶಿಶ್ ಅವರ ಈ ಪೋಸ್ಟ್ ನಂತರ, ಈಗ ಹನ್ಸಲ್ ಮೆಹ್ತಾ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ, ಅವರು ಟ್ವೀಟ್ ಮಾಡಿದ್ದು, ನಟನಿಗಾಗಿ ಸಂಘದಿಂದ ಸಹಾಯವನ್ನು ಕೋರಿದ್ದಾರೆ.

ಹನ್ಸಾಲ್ ಮೆಹ್ತಾ ತಮ್ಮ ಟ್ವೀಟ್‌ನಲ್ಲಿ ‘ನಟ ಆಶಿಶ್ ರಾಯ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಡಯಾಲಿಸಿಸ್‌ಗೆ ಒಳಗಾಗಿದ್ದು, ಪ್ರಸ್ತುತ ಐಸಿಯುನಲ್ಲಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ನನ್ನೊಂದಿಗೆ ಸಾಧ್ಯವಾದಷ್ಟು ನಾನು ಮಾಡುತ್ತಿದ್ದೇನೆ, ಆದರೆ ಸಂಘವು ನಟನಿಗೆ ಸಹಾಯ ಮಾಡಬಹುದೇ? ಇದನ್ನು ಹನ್ಸಲ್ ಮೆಹ್ತಾ ಟ್ವೀಟರ್  ನಲ್ಲಿ ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ಉದ್ಯಮಕ್ಕೆ ಸಂಬಂಧಿಸಿದ ಅನೇಕ ಜನರನ್ನು ಟ್ಯಾಗ್ ಮಾಡಿದ್ದಾರೆ. (ಏಜೆನ್ಸೀಸ್, ಎಸ್.ಎಚ್)

Leave a Reply

comments

Related Articles

error: