ಮನರಂಜನೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್   ಮ್ಯಾಜಿಕ್ :    ಪ್ರೇಮಗೀತೆ ‘ತೇರೆ ಬಿನಾ’ ಗೆ ಸಿಕ್ತು ಕೋಟಿ ವ್ಯೂ

ದೇಶ(ನವದೆಹಲಿ)ಮೇ.20:-    ಬಾಲಿವುಡ್ ಸೂಪರ್ ಸ್ಟಾರ್  ಸಲ್ಮಾನ್ ಖಾನ್ ಅವರ ‘ತೇರೆ ಬಿನಾ’  ರೊಮ್ಯಾಂಟಿಕ್ ಹಾಡು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ.

ಈ ಹಾಡು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ ಈ ಹಾಡು 12 ಮಿಲಿಯನ್ ವ್ಯೂ ಪಡೆದಿದೆ.  ಈ ಹಾಡು ಒಂದು ವಾರದೊಳಗೆ 26.6 ಮಿಲಿಯನ್ ವ್ಯೂ ಗಳಿಸಿದೆ. ಈ ಹಾಡನ್ನು ಸಲ್ಮಾನ್ ಹಾಡಿದ್ದಲ್ಲದೇ ನಿರ್ದೇಶನ ಕೂಡ ಅವರದ್ದೇ.  ಹಾಡನ್ನು ಅವರ ಸ್ನೇಹಿತ ಅಜಯ್ ಭಾಟಿಯಾ ಸಂಯೋಜಿಸಿದ್ದಾರೆ. ಹಾಡಿನ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ಬರೆದಿದ್ದಾರೆ. ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್  ಹಾಡಿನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಹಾಡಿನ ಬಗ್ಗೆ ಮಾತನಾಡಿದ ಸಲ್ಮಾನ್, “ಸುಮಾರು ಏಳು ವಾರಗಳ ಹಿಂದೆ, ನಾವು ತೋಟದ ಮನೆಗೆ ಬಂದಾಗ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ. ಲಾಕ್ ಡೌನ್ ಆಯಿತು. ಇಲ್ಲಿಯೇ ಕಾರ್ಯ ನಿರತರಾದೆವು.  ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: