ಪ್ರಮುಖ ಸುದ್ದಿ

ಆಶಾ ಕಾರ್ಯಕರ್ತರಿಗೆ ತಲಾ ರೂ 3,000 ಗೌರವ ಧನ ಚೆಕ್ ಜೊತೆ ಸಿಹಿ ನೀಡುವ ಮೂಲಕ ಚಾಲನೆ ನೀಡಿದ ಸಿಎಂ

ರಾಜ್ಯ(ಬೆಂಗಳೂರು)ಮೇ.20:-  ಕರ್ನಾಟಕ ರಾಜ್ಯದ ಒಟ್ಟು 41,171 ಕೋವಿಡ್-_19 ವಾರಿಯರ್ಸ್ ಆಶಾ ಕಾರ್ಯಕರ್ತರಿಗೆ ತಲಾ 3,000 ರೂಪಾಯಿಗಳನ್ನು ನೀಡಲು  ಮುಖ್ಯಮಂತ್ರಿಗಳು 1 ವಾರದ ಹಿಂದೆ ನಮ್ಮ ಸಹಕಾರ ಇಲಾಖೆ ಮುಖಾಂತರ ಗೌರವಧನ ಒದಗಿಸಲು ಸೂಚಿಸಿದ್ದರು, ಆ ಹಿನ್ನೆಲೆಯಲ್ಲಿ ಇಂದು ಸಾಂಕೇತಿಕವಾಗಿ   ಮುಖ್ಯಮಂತ್ರಿಗಳು 10 ಜನ ಆಶಾ ಕಾರ್ಯಕರ್ತರಿಗೆ ತಲಾ ರೂ 3,000 ಚೆಕ್ ಜೊತೆಗೆ ನಂದಿನಿ ಸಿಹಿ ನೀಡುವ ಮುಖಾಂತರ ಸಾಂಕೇತಿಕವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಮ್ಮೊಂದಿಗೆ ಕೆಎಂಎಫ್ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗಾಗಲೇ ರಾಜ್ಯದಲ್ಲಿ 3,110 ಆಶಾ ಕಾರ್ಯಕರ್ತರಿಗೆ 92 ಲಕ್ಷದ 36 ಸಾವಿರ ರೂಪಾಯಿಗಳನ ವಿತರಿಸಲಾಗಿದೆ, ಇನ್ನೂ ಒಂದು ವಾರದ ಒಳಗೆ ರಾಜ್ಯಾದ್ಯಂತ ಎಲ್ಲಾ ಆಶಾ ಕಾರ್ಯಕರ್ತರಿಗೆ ಸಹಕಾರ ಇಲಾಖೆಯ ಮುಖಾಂತರ ಚೆಕ್ ವಿತರಿಸುವ ಗುರಿ ಹೊಂದಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: