ಪ್ರಮುಖ ಸುದ್ದಿಮೈಸೂರು

ನಾಳೆಯಿಂದ ಬೆಂಗಳೂರು-ಮೈಸೂರು,ಬೆಂಗಳೂರು-ಬೆಳಗಾವಿ ರೈಲು ಆರಂಭ

ಮೈಸೂರು/ಬೆಂಗಳೂರು,ಮೇ.21:-  ಬೆಂಗಳೂರಿನಿಂದ ಮೈಸೂರು ಹಾಗೂ ಬೆಳಗಾವಿಗೆ ಮೇ 22ರಿಂದ ಪ್ರಾಯೋಗಿಕವಾಗಿ 2 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಿನ್ನೆ  ಮಾಧ್ಯಮದ ಮಾತನಾಡಿದ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮೇರೆಗೆ ರೈಲುಗಳ ಸಂಚಾರ ಆರಂಭಿಸುತ್ತಿದ್ದೇವೆ. ಜನರು ಸಾರ್ವಜನಿಕ ಅಂತರ ಕಾಪಾಡಿಕೊಳ್ಳಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಂಚರಿಸಬೇಕು.ಮೊದಲಿನಂತೆ ರೈಲು ನಿಲ್ದಾಣಕ್ಕೆ ಬಂದು ಜಮಾಯಿಸಬಾರದು. ಬಂದು ಆತಂಕಕ್ಕೆ ಒಳಗಾಗಬಾರದು. ಕಡ್ಡಾಯವಾಗಿ ಆನ್ಲೈನ್ ನಲ್ಲಿಯೇ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಖಚಿತವಾದ ಮೇಲಷ್ಟೇ ನಿಲ್ದಾಣಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಕೆಎಸ್‌ಆರ್ ರೈಲು ಬೆಂಗಳೂರಿನಿಂದ ಬೆಳಿಗ್ಗೆ 9.20ಕ್ಕೆ ಹೊರಡಲಿದ್ದು, ಮೈಸೂರು ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ 12.45ಕ್ಕೆ ತಲುಪಲಿದೆ. ಮೈಸೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 1.45ಕ್ಕೆ ತೆರಳುವ ರೈಲು ಗಾಡಿಯು, ಬೆಂಗಳೂರಿಗೆ ಸಂಜೆ 5 ಗಂಟೆಗೆ ತಲುಪಲಿದೆ. ಮೈಸೂರಿನಿಂದ ಹೊರಡುವ ರೈಲು ಗಾಡಿಯು ನಾಗನಹಳ್ಳಿ, ಪಾಂಡವಪುರ, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಬೆಂಗಳೂರು ತಲುಪಲಿದೆ.

ಬೆಂಗಳೂರಿನಿಂದ ಹೊರಡುವ ರೈಲು ಗಾಡಿಯು ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ಹಾಗೂ ಮೈಸೂರು ತಲುಪಲಿದೆ ಎಂದು ಇದಕ್ಕೂ ಮುನ್ನ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: