ಪ್ರಮುಖ ಸುದ್ದಿಮೈಸೂರು

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೋವಿಡ್ 19 – ಟಾಸ್ಕ್ ಫೋರ್ಸ್ ಸಮಗ್ರ ವರದಿ ಸಲ್ಲಿಕೆ

ಮೈಸೂರು/ಬೆಂಗಳೂರು, ಮೇ.21:- ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯಪಡೆ ಹಾಗೂ ವಿಧಾನಸಭಾವಾರು ಟಾಸ್ಕ್ ಫೋರ್ಸ್ ಗಳು ( TASK FORCE ) ರಾಜ್ಯದಲ್ಲಿ ಲಾಕ್ ಡೌನ್  ಪರಿಸ್ಥಿತಿ  ಎದುರಾದಾಗ ದುರ್ಬಲ ಹಾಗೂ ನಿರಾಶ್ರಿತರಿಗಾಗಿ  ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ತೆಗೆದುಕೊಂಡ  ಕ್ರಮಗಳು ಹಾಗೂ  ಆಸರೆಯಾದ ವಿನೂತನ ಯೋಜನೆಗಳ ಬಗ್ಗೆ ಸಮಗ್ರ ವರದಿಯನ್ನು ಹಿರಿಯ ರಾಜಕೀಯ ಮುತ್ಸದಿಗಳು ಹಾಗೂ ಪ್ರತಿಪಕ್ಷದ ನಾಯಕರಾದ   ಸಿದ್ದರಾಮಯ್ಯನವರಿಗೆ   ಮೈಸೂರು ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆವಿ   ಅವರು ಬೆಂಗಳೂರಿನ  ಸಿದ್ದರಾಮಯ್ಯನವರ  ನಿವಾಸದಲ್ಲಿಂದು ಸಲ್ಲಿಸಿದರು.

ಈ ಸಂದರ್ಭದಲ್ಲಿ  ಯುವ ನಾಯಕರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ   ಶಾಸಕರಾದ   ಡಾ. ಯತೀಂದ್ರ ಸಿದ್ದರಾಮಯ್ಯ ನವರು  ಜಿಲ್ಲಾಧ್ಯಕ್ಷರಿಗೆ ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: