ದೇಶಮನರಂಜನೆ

ಎಂಗೇಜ್ ಆದ ಬಾಹುಬಲಿಯ ನಟ ರಾಣಾ ದಗ್ಗುಬಾಟಿ

ಹೈದರಾಬಾದ್,ಮೇ 21-ಬಾಹುಬಲಿ ಸಿನಿಮಾದ ಖ್ಯಾತ ನಟ ರಾಣಾ ದಗ್ಗುಬಾಟಿ ತಮ್ಮ ಬಹುಕಾಲದ ಗೆಳತಿ ಮಿಹೀಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿನ್ನೆ ರಾಣಾ ಮತ್ತು ಮಿಹೀಕಾ ನಿಶ್ಚಿತಾರ್ಥ ನೆರವೇರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ‘ಈಗ ಇದು ಅಧಿಕೃತ’ ಎಂದು ಬರೆದುಕೊಂಡಿದ್ದಾರೆ.

ಮೇ 12ರಂದು ಮದುವೆಯಾಗುವ ಹುಡುಗಿ ಮಿಹೀಕಾರನ್ನು ರಾಣಾ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮಿಹೀಕಾ ಜೊತೆಗಿನ ಸಂಬಂಧವನ್ನು ಇಷ್ಟುದಿನ ರಾಣಾ ತುಂಬ ಸಿಕ್ರೇಟ್ ಆಗಿಟ್ಟಿದ್ದರು. Dew Drop Design Studio ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಸ್ಥಾಪಕಿ ಮಿಹೀಕಾ. ಇಂಟಿರೀಯರ್ ಡಿಸೈನ್‌ನಲ್ಲಿ ಡಿಪ್ಲೋಮಾ ಮಾಡಿದ್ದು, ಲಂಡನ್‌ನ ಚೆಸ್ಲಿಯಾ ಯುನಿವರ್ಸಿಟಿ ಆಫ್ ಆರ್ಟ್, ಡಿಸೈನ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಮುಂಬೈನಲ್ಲಿ ಇಂಟಿರಿಯರ್ ಡಿಸೈನರ್ ಆಗಿ ಒಂದು ವರ್ಷ ಕೆಲಸ ಮಾಡಿರುವ ಮಿಹೀಕಾ, ‘ಡಿಸೈನ್ ಪಟಾಕಿ’ಯಲ್ಲಿ ಬರಹಗಾರ್ತಿಯಾಗಿದ್ದಾರೆ.

ಇನ್ನು ರಾಣಾ ತಂದೆ ಸುರೇಶ್ ಬಾಬು ಕಳೆದ ಒಂದು ದಿನದ ಹಿಂದೆಯಷ್ಟೇ ಸಂದರ್ಶನವೊಂದರಲ್ಲಿ ಮಗನ ನಿಶ್ಚಿತಾರ್ಥ ಆಗಿಲ್ಲ, ಇದಕ್ಕೆಲ್ಲ ಟೈಮ್ ಇದೆ. ಮಿಹೀಕಾ ಅವರ ತಂದೆ-ತಾಯಿಯನ್ನು ನಾವು ಭೇಟಿ ಮಾಡಿದ್ದೇವೆ ಅಷ್ಟೇ. ರಾಣಾ-ಮಿಹೀಕಾ ನಿಶ್ಚಿತಾರ್ಥ ಇನ್ನೂ ಆಗಿಲ್ಲ. ನಿಶ್ಚಿತಾರ್ಥ, ಮದುವೆ ಮಾಡೋಕೆ ಇನ್ನೂ ಟೈಮ್ ಇದೆ. ಮದುವೆ, ನಿಶ್ಚಿತಾರ್ಥದ ದಿನಾಂಕ ನಾವಿನ್ನೂ ಫಿಕ್ಸ್ ಮಾಡಿಲ್ಲ. ಚಳಿಗಾಲದಲ್ಲಿ ಮದುವೆ ಮಾಡಬೇಕು ಎಂಬ ಪ್ಲ್ಯಾನ್ ಇದೆ. ಆದರೆ ಕೊರೊನಾ ವೈರಸ್‌, ಲಾಕ್ ಡೌನ್ ಕಾರಣಕ್ಕೆ ಎಷ್ಟು ದಿನ ಲೇಟ್ ಆಗತ್ತೋ ಗೊತ್ತಿಲ್ಲ. ಎಲ್ಲವೂ ಫೈನಲ್ ಆದ ಮೇಲೆ ನಾವು ಅಧಿಕೃತ ಘೋಷಣೆ ಮಾಡುತ್ತೇವೆ ಎಂದಿದ್ದರು. ಆದರೆ ಇದೀಗ ರಾಣಾ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: