ಮೈಸೂರು

ಮಾ.23 ರಂದು ಇಂಧನ ಖರೀದಿ ಸ್ಥಗಿತ

ಬಿ.ಪಿ.ಸಿ.ಎಲ್ ಡೀಲರ್ ಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಕುರಿತು ಬಿ.ಪಿ.ಸಿ.ಎಲ್ ಮೈಸೂರಿನ ಪ್ರಾಂತೀಯ ಕಚೇರಿಗೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲವಾದ್ದರಿಂದ  ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ, ರಾಮನಗರ ಮತ್ತು ಹಾಸನ ಜಿಲ್ಲೆಯ ಬಿ.ಪಿ.ಸಿ.ಎಲ್ ಡೀಲರ್ ಗಳು  ಮಾ.23 ರಂದು ಇಂಧನ ಖರೀದಿಯನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಮೈಸೂರು ಪ್ರಾಂತೀಯ ಭಾರತ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ನ ಕಾರ್ಯಾಧ‍್ಯಕ್ಷ ಎಸ್.ಗೋವಿಂದರಾಜನ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಂಜನಗೂಡಿನ ಸಪ್ತಗಿರಿ ಸರ್ವೀಸ್ ಸ್ಟೇಷನ್ ಹಾಗೂ ಮೈಸೂರಿನ ಲಕ್ಷ್ಮಿ ಪಾಟೀಲ್ ಸರ್ವೀಸ್ ಸ್ಟೇಷನ್  ನಲ್ಲಿ ಪೈಪ್ ಲೈನ್ ದೋಷದಿಂದಾಗಿ ಡೀಸೆಲ್ ಸೋರಿಕೆಯಾಗಿದ್ದು, ಈ ನಷ್ಟವನ್ನು ಹಿಂಭರ್ತಿ ಮಾಡಬೇಕು. ಶಿವಶಕ್ತಿ ಸರ್ವೀಸ್ ಸ್ಟೇಷನ್ ಪೆಟ್ರೋಲ್ ಟ್ಯಾಂಕಿಗೆ ನೀರು ಸೇರುತ್ತಿದ್ದು, ಇದರಿಂದ ಉಂಟಾಗಿರುವ ತೊಂದರೆಯನ್ನು ನಿವಾರಿಸಬೇಕು. ಬ್ಯಾಂಕ್ ರಜಾ ದಿನಗಳಲ್ಲಿ ಇಂಧನ ಸರಬರಾಜಿಗೆ ಬಡ್ಡಿ ಹಾಕುತ್ತಿದ್ದು, ಇದನ್ನು ಹಿಂಭರ್ತಿ ಮಾಡುವುದಲ್ಲದೇ ಬಡ್ಡಿ ತೆಗೆಯಬೇಕು.  ಗಿಫ್ಟ್ ವೋಚರ್ಸ್ ಮೊತ್ತವನ್ನು ಡೀಲರ್ ಗಳಿಗೆ ಹಿಂಭರ್ತಿ ಮಾಡಬೇಕು  ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿವಾರ್ಯವಾಗಿ ಈ ಇಂಧನವನ್ನು ಸ್ಥಗಿತ ಗೊಳಿಸಲಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್. ಆರ್. ಪಾಟೀಲ್, ಶ್ರೀಧರ್, ವೆಂಕಟೇಶ್, ರಂಜಿತ್ ಹೆಗಡೆ, ಭಾಗ್ಯ, ನಾರಾಯಣಸ್ವಾಮಿ  ಹಾಜರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: