ಮೈಸೂರು

ಜ್ಯುಬಿಲಿಯೆಂಟ್ ಜೆನೆರಿಕ್ ಔಷಧ ತಯಾರಿಕಾ ಕಂಪನಿ ಪುನರಾರಂಭಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ

ಮೈಸೂರು,ಮೇ.22:-   ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಜ್ಯುಬಿಲಿಯೆಂಟ್ ಜೆನೆರಿಕ್ ಔಷಧ ತಯಾರಿಕಾ ಕಂಪನಿ ಪುನರಾರಂಭಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ತಯಾರಿಕಾ ಘಟಕದಲ್ಲಿ ಓರ್ವ ವ್ಯಕ್ತಿಯಿಂದ ಹಲವು ವ್ಯಕ್ತಿಗೆ ಕೊರೋನಾ ವೈರಸ್ ಹರಡಿದ ಕಾರಣ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಕಾರಣಕ್ಕೆ ಕಾರ್ಖಾನೆಗೆ ಬೀಗ ಹಾಕಲಾಗಿತ್ತು. ವೈರಸ್ ಮೂಲ ಪತ್ತೆಗೆ ಸರ್ಕಾರ ತನಿಖೆ ನಡೆಸಿತಾದರೂ ಕೊನೆಗೂ ಅದರ ಮೂಲ ಮಾತ್ರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಮೂಲ ಪತ್ತೆಯಾಗಿಲ್ಲ ಎಂದು ವರದಿ ಸಲ್ಲಿಸಿ ಪ್ರಕರಣ ಮುಕ್ತಾಯಗೊಳಿಸಲಾಯಿತು.

ಈಗ ದೇಶ ವಿದೇಶಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಬಳಸುವ ಔಷಧವೂ ಸೇರಿದಂತೆ ಹಲವು ಮಹತ್ವದ ಔಷಧಗಳಿಗೆ ವ್ಯಾಪಕ ಬೇಡಿಕೆ ಇರುವುದರಿಂದ ತಕ್ಷಣವೇ ಘಟಕ ಆರಂಭಿಸಲು ಅನುಮತಿ ನೀಡುವಂತೆ ಕಂಪನಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಎಲ್ಲ ಔದ್ಯೋಗಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಅಂತೆಯೇ ಕೋವಿಡ್-19ನಿಂದಾಗಿ ಮುಚ್ಚಲಾಗಿದ್ದ ಜ್ಯುಬಿಲಿಯೆಂಟ್  ಕಾರ್ಖಾನೆಯನ್ನು ಸಹ ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಆ ಮೂಲಕ ಈ ಕಾರ್ಖಾನೆ ಪುನರಾರಂಭ ಕುರಿತು ಎದ್ದಿದ್ದ ಗೊಂದಲ ತಿಳಿಗೊಳಿಸಿ ಹಸಿರು ನಿಶಾನೆ ತೋರಿಸಿದಂತಾಗಿದೆ.

ಅಮೇರಿಕಾ ಮೂಲದ ಕಂಪನಿಯೊಂದಿಗೆ ಜ್ಯುಬಿಲಿಯೆಂಟ್ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಈ ಕಾರ್ಖಾನೆಯಲ್ಲಿ ಕೊರೋನಾ ಔಷಧ ಉತ್ಪಾದನೆ ಆಗಬೇಕಿದೆ. ಇದೊಂದೇ ಕಾರಣಕ್ಕೆ ನಾನು ಯೂಟರ್ನ್ ತೆಗೆದುಕೊಳ್ಳಲೇ ಬೇಕಿದೆ. ಈ ವಿಚಾರವಾಗಿ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಮಾತುಕತೆ ಆಗಿದೆ. ಅವರ ಸೂಚನೆಯಂತೆ ನಾನು ಸುಮ್ಮನಾಗಿದ್ದೇನೆ ಎಂದು ಶಾಸಕ ಹರ್ಷವರ್ಧನ್  ಹೇಳಿದ್ದರು.

‘ಮೇ 25ರಂದು ಜ್ಯುಬಿಲಿಯೆಂಟ್  ಕಾರ್ಖಾನೆ ಪುನರಾರಂಭವಾಗಲಿದೆ. ಇದಕ್ಕಾಗಿ 3 ಷರತ್ತು ವಿಧಿಸಲಾಗಿದೆ. 50,000 ಆಹಾರ ಕಿಟ್, 10 ಗ್ರಾಮಗಳ ದತ್ತು, ಮುಂದೆ ಅನಾಹುತ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: