ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಇಂದು 105 ಮಂದಿಯಲ್ಲಿ ಕೊರೊನಾ ಸೋಂಕು ದೃಢ: ಸೋಂಕಿತರ ಸಂಖ್ಯೆ 1710 ಕ್ಕೆ ಏರಿಕೆ

ಬೆಂಗಳೂರು,ಮೇ 22-ರಾಜ್ಯದಲ್ಲಿ ಇಂದು ಬರೋಬ್ಬರಿ 105 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ 45, ಹಾಸನದಲ್ಲಿ 14, ತುಮಕೂರಿನಲ್ಲಿ 8, ಬೀದರ್ ನಲ್ಲಿ 6, ಬೆಂಗಳೂರು ನಗರ, ಚಿಕ್ಕಮಗಳೂರಿನಲ್ಲಿ ತಲಾ 5, ಬೆಂಗಳೂರು ಗ್ರಾಮಾಂತರದಲ್ಲಿ 4, ಮಂಡ್ಯ, ದಾವಣಗೆರೆ, ಹಾವೇರಿಯಲ್ಲಿ ತಲಾ 3, ಧಾರವಾಡ, ವಿಜಯಪುರದಲ್ಲಿ ತಲಾ 2,  ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.

ಅಲ್ಲದೆ, 17 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಗುಣಮುಖರಾದವರ ಸಂಖ್ಯೆ 588ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 6, ವಿಜಯಪುರದಲ್ಲಿ 4, ಕಲಬುರಗಿಯಲ್ಲಿ 3, ಬಾಗಲಕೋಟೆಯಲ್ಲಿ 2, ಬೆಳಗಾವಿ, ದಕ್ಷಿಣ ಕನ್ನಡದಲ್ಲಿ ತಲಾ 1 ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಪಿ-433, ಪಿ-462, ಪಿ-654, ಪಿ-706, ಪಿ-708, ಪಿ-711, ವಿಜಯಪುರದಲ್ಲಿ ಪಿ-275, ಪಿ-510, ಪಿ-538, ಪಿ-769, ಕಲಬುರಗಿಯಲ್ಲಿ ಪಿ-697, ಪಿ-698, ಪಿ-699, ಬಾಗಲಕೋಟೆಯಲ್ಲಿ ಪಿ-683, ಪಿ-702, ಬೆಳಗಾವಿಯಲ್ಲಿ ಪಿ-483, ದಕ್ಷಿಣ ಕನ್ನಡದಲ್ಲಿ ಪಿ-506 ಗುಣಮುಖರಾದವರು.

ರಾಜ್ಯಕ್ಕೆ ಮಹಾರಾಷ್ಟ್ರ ಕಂಟಕವಾಗಿ ಪರಿಣಮಿಸಿದ್ದು, ಇಂದು ವರದಿಯಾಗಿರುವ 105 ಸೋಂಕಿತರ ಪೈಕಿ 84 ಮಂದಿಗೆ ಮಹಾರಾಷ್ಟ್ರದಿಂದ ಸೋಂಕು ತಗುಲಿದೆ. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಮಂಡ್ಯದ  ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ತುಮಕೂರಿನಲ್ಲಿ 6 ಮಂದಿಗೆ ಮಹಾರಾಷ್ಟ್ರದ ನಂಟಿದ್ದು, ಇಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಬೀದರ್ ನಲ್ಲಿ ನಾಲ್ವರಿಗೆ ಮಹಾರಾಷ್ಟ್ರದ ನಂಟಿದ್ದು, ಇಬ್ಬರು ತೆಲಂಗಾಣದಿಂದ ಬಂದವರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಮೂವರಿಗೆ ಮಹಾರಾಷ್ಟ್ರದ ನಂಟಿದ್ದು, ಒಬ್ಬರಿಗೆ ತೀವ್ರ ಉಸಿರಾಟದ ತೊಂದರೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡದ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಹಾವೇರಿಯಲ್ಲಿ ಇಬ್ಬರಿಗೆ ಮಹಾರಾಷ್ಟ್ರದ ನಂಟಿದ್ದು, ಒಬ್ಬರು ಜಿಲ್ಲೆಯ ಕಂಟೈನ್ಮೆಂಟ್ ಜೋನ್ ನ ಸಂಪರ್ಕದಲ್ಲಿದ್ದರು.

ಬೆಂಗಳೂರು ನಗರದಲ್ಲಿ ಇಬ್ಬರಿಗೆ ರೋಗಿ 706ರ ಸಂಪರ್ಕದಿಂದ ಸೋಂಕು ತಗುಲಿದ್ದು, ಇಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದು, ಒಬ್ಬರಿಗೆ ಅನಾರೋಗ್ಯದಂತಹ (ಐಎಲ್ಐ) ಲಕ್ಷಣವಿದೆ.

ದಾವಣಗೆರೆಯಲ್ಲಿ ರೋಗಿ 1483ರ ಸಂಪರ್ಕದಿಂದ ಮೂವರಿಗೆ ಸೋಂಕು ತಗುಲಿದೆ. ಧಾರವಾಡದಲ್ಲಿ ಸೋಂಕಿತರಿಬ್ಬರು ನವದೆಹಲಿಯಿಂದ ಬಂದವರಾಗಿದ್ದಾರೆ. ವಿಜಯಪುರದಲ್ಲಿ ಸೋಂಕಿತರಿಬ್ಬರಿಗೂ ಜಿಲ್ಲೆಯ ಕಂಟೈನ್ಮೆಂಟ್ ಜೋನ್ ಸಂಪರ್ಕವಿದೆ.

ಬೆಳಗಾವಿಯ ಸೋಂಕಿತ ಜಾರ್ಖಂಡ್ ನಿಂದ ವಾಪಸ್ ಬಂದಿದ್ದಾರೆ. ಬಾಗಲಕೋಟೆಯ ಸೋಂಕಿತನಿಗೆ ರೋಗಿ 680ರ ಸಂಪರ್ಕದಿಂದ ಸೋಂಕು ತಗುಲಿದೆ. ಚಿತ್ರದುರ್ಗದ ಸೋಂಕಿತನಿಗೆ ಅನಾರೋಗ್ಯದಂತಹ (ಐಎಲ್ಐ) ಲಕ್ಷಣವಿದೆ.

ರಾಜ್ಯದಲ್ಲಿ ಈವರೆಗೆ 1710 ಸೋಂಕಿತರ ಪೈಕಿ 588 ಮಂದಿ ಗುಣಮುಖರಾಗಿದ್ದು, 41 ಮಂದಿ ಮೃತಪಟ್ಟಿದ್ದು, 1080 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: