ಕ್ರೀಡೆ

ಆಸ್ಟ್ರೇಲಿಯಾದೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಸರಣಿ  ಆಡುವುದು ಬಹುತೇಕ ಖಚಿತ : ರಾಬರ್ಟ್ಸ್ ವಿಶ್ವಾಸ

ದೇಶ(ನವದೆಹಲಿ)ಮೇ.22:-  ಕೊರೋನಾ ವೈರಸ್ ಇಡೀ ದೇಶವನ್ನೇ ತಲ್ಲಣಗೊಳಿಸಿದೆಯಲ್ಲದೇ ಕ್ರೀಡೆಗೂ ಧಕ್ಕೆಯುಂಟು ಮಾಡಿದೆ. ಕೊರೋನಾ ವೈರಸ್ ನಿಂದಾಗಿ  ಕ್ರಿಕೆಟ್‌ ನಡೆಯಲು ಸಾಧ್ಯವಿಲ್ಲದೇ ಸಾಕಷ್ಟು ನಷ್ಟವಾಗಿದ್ದು, ನಷ್ಟವನ್ನು ಸರಿದೂಗಿಸಲು ಬಿಸಿಸಿಐ ಹೆಚ್ಚಿನ ದೇಶಗಳ ಕ್ರಿಕೆಟ್ ಮಂಡಳಿಯ ಮೇಲೆ ಕಣ್ಣಿಟ್ಟಿದೆ.

ಕ್ರಿಕೆಟ್ ಮತ್ತೆ ಪ್ರಾರಂಭವಾದಾಗ ಪ್ರತಿ ದೇಶವು ಟೀಮ್ ಇಂಡಿಯಾದೊಂದಿಗೆ ಕ್ರಿಕೆಟ್ ಸರಣಿ ಆಡ  ಬಯಸುತ್ತದೆ. ಈ ವರ್ಷದ ಕೊನೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸರಣಿ ನಡೆಯುವ  ಸಾಧ್ಯತೆ ಶೇಕಡಾ 90 ರಷ್ಟು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಯಾವುದೇ ಸಂದರ್ಭದಲ್ಲಿ ಭಾರತದೊಂದಿಗೆ ಈ ಸರಣಿಯನ್ನು ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಬಯಸಿದೆ. ಈ ಸರಣಿಯ ಪ್ರಸಾರ ಹಕ್ಕುಗಳಿಂದ ಕ್ರಿಕೆಟ್ ಆಸ್ಟ್ರೇಲಿಯಾ 300 ಮಿಲಿಯನ್ ಡಾಲರ್ ಪಡೆಯಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 80 ಪ್ರತಿಶತ ಸಿಬ್ಬಂದಿಯನ್ನು 20 ಪ್ರತಿಶತದಷ್ಟು ಸಂಬಳದಲ್ಲಿ ಜೂನ್ ವರೆಗೆ ಇರಿಸಿಕೊಳ್ಳಬೇಕಿದೆ.

ಈ ಸರಣಿಯನ್ನು ಅಕ್ಟೋಬರ್ ನಿಂದ 2021 ರವರೆಗೆ ಆಡಲಾಗುವುದು. ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ರಾಬರ್ಟ್ಸ್, “ಈ ದಿನಗಳಲ್ಲಿ ಯಾವುದೂ ಖಚಿತವಾಗಿಲ್ಲ. ಪ್ರವಾಸದ ಸಾಧ್ಯತೆಗಳು ಹತ್ತಕ್ಕೆ ಹತ್ತು ಎಂದು ನಾನು ಹೇಳುವುದಿಲ್ಲ, ಆದರೆ ಹತ್ತರಲ್ಲಿ ಒಂಭತ್ತು ಖಂಡಿತವಾಗಿಯೂ ಇರಲಿದೆ ಎಂದಿದ್ದಾರೆ.

“ಪ್ರೇಕ್ಷಕರು ಇರುತ್ತಾರೋ ಇಲ್ಲವೋ ಎಂದು ನಾವು ಈಗ ಏನನ್ನೂ ಹೇಳಲು ಸಾಧ್ಯವಿಲ್ಲ”.   ಭಾರತ  ಪ್ರವಾಸ ನಡೆದಿದ್ದರೆ ನನಗೆ ಆಶ್ಚರ್ಯವಾಗುತ್ತದೆ. ಆದರೆ ಆರಂಭದಿಂದಲೂ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಇರುವುದಿಲ್ಲ ಎಂದು ನಾನು ಖಂಡಿತವಾಗಿ ಹೇಳುತ್ತೇನೆ. ಅದರ ನಂತರ ಏನಾಗುತ್ತದೆ ಎಂದು ನೋಡೋಣ ಎಂದಿದ್ದಾರೆ. (ಏಜೆನ್ಸೀಸ್, ಎಸ್.ಎಚ್)

Leave a Reply

comments

Related Articles

error: