ದೇಶಪ್ರಮುಖ ಸುದ್ದಿ

ಮಹಾರಾಷ್ಟ್ರ: 48 ಗಂಟೆಗಳಲ್ಲಿ 278 ಪೊಲೀಸರಲ್ಲಿ ಕೊರೊನಾ ದೃಢ

ಮುಂಬೈ,ಮೇ 22-ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚಾಗುತ್ತಲೇ ಇದೆ. ಕಳೆದ 48 ಗಂಟೆಗಳಲ್ಲಿ ಬರೋಬ್ಬರಿ 278 ಮಂದಿ ಪೊಲೀಸರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ.

ಈ ಕುರಿತು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದೆ. ಇದರೊಂದಿಗೆ ಒಟ್ಟು ಸೋಂಕಿತ ಪೊಲೀಸರ ಸಂಖ್ಯೆ 1,666ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

1,666 ಮಂದಿ ಸೋಂಕಿತರ ಪೈಕಿ ಈವರೆಗೂ 473 ಮಂದಿ ಗುಣಖರಾಗಿದ್ದು, ಇನ್ನೂ 1,177 ಮಂದಿಯಲ್ಲಿ ಸೋಂಕಿನಿಂದ ಬಳಲುತ್ತಿದ್ದಾರೆ. ಈವರೆಗೂ ಮಹಾಮಾರಿ ವೈರಸ್ ಗೆ 16 ಮಂದಿ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆಗೆ 41642 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 1454 ಮಂದಿ ಮೃತಪಟ್ಟಿದ್ದಾರೆ. 11726 ಮಂದಿ ಗುಣಮುಖರಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: