ಮೈಸೂರು

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಟಿವಿಎಸ್ ಸ್ಕೂಟಿ : ಸಂಪೂರ್ಣ ಭಸ್ಮ

ಯುವತಿಯೋರ್ವರು ಚಲಿಸುತ್ತಿದ್ದ ಟಿವಿಎಸ್ ಸ್ಕೂಟಿಯೊಂದು ಚಾಲನೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಯುವತಿ ವಾಹನದಿಂದಿಳಿದು ಮತ್ತೆ ವಾಹನ ಚಾಲನೆಗೆ ಪ್ರಯತ್ನಿಸಿದ ವೇಳೆ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು ಭಸ್ಮವಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜೆ.ಪಿ.ನಗರ ನಿವಾಸಿ ನಿವೇದಿತ ಅರಸ್  ಕಳೆದ ರಾತ್ರಿ ಬಿಗ್ ಬಜಾರ್ ನಿಂದ ತಮ್ಮ ಮನೆ ಜೆ.ಪಿ.ನಗರದತ್ತ ತೆರಳುತ್ತಿದ್ದರು. ಈ ವೇಳೆ ವೇದಾಂತ ಹೆಮ್ಮಿಗೆ ವೃತ್ತದ ಸಮೀಪ ಎಸ್ ಡಿಎಂ ಕಾಲೇಜು ಬಳಿ ಅವರು ಚಾಲನೆ ಮಾಡುತ್ತಿದ್ದ ಟಿವಿಎಸ್ ಸ್ಕೂಟಿ  ಕೆಎ 09 ಇಕ್ಯೂ 9088 ಎಸ್ ಸ್ಥಗಿತಗೊಂಡು ನಿಂತಿದೆ. ಇದರಿಂದ ವಾಹನದಿಂದಿಳಿದ ನಿವೇದಿತಾ ವಾಹನೆ ಚಲಿಸುವಂತೆ ಮಾಡಲು ಪ್ರಯತ್ನಿಸಿದರು ಎನ್ನಲಾಗಿದೆ. ಇದೇ ವೇಳೆ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಇದನ್ನು ನೋಡಿದ ಸ್ಥಳೀಯರು ನೀರನ್ನು ತಂದು ಸುರಿದರು. ಆದರೂ ಬೆಂಕಿ ಆರ ಹಿನ್ನೆಲೆಯಲ್ಲಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಲಾಯಿತು. ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ಆರಿಸಿದ್ದಾರೆ. ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣೆಯ ಎಎಸ್ಐ ವನಜಾಕ್ಷಿ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: