ಪ್ರಮುಖ ಸುದ್ದಿ

ಕರ್ನಾಟಕ – ತಮಿಳುನಾಡು ಗಡಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಪ್ರವೇಶ : ಚಾಮರಾಜನಗರ ಜಿಲ್ಲೆಯ ಜನರಲ್ಲಿ ಆತಂಕ

ರಾಜ್ಯ(ಚಾಮರಾಜನಗರ)ಮೆ.22:-  ಕರ್ನಾಟಕ – ತಮಿಳುನಾಡು ಗಡಿಯಲ್ಲಿ ಅಕ್ರಮ ಪ್ರವೇಶ ಹೆಚ್ಚಾಗಿದ್ದು, ಕಳ್ಳದಾರಿಯ ಮೂಲಕ ಚಾಮರಾಜನಗರದತ್ತ ಜನರು ನುಸುಳುತ್ತಿದ್ದಾರೆ.

ತಮಿಳುನಾಡಿನಿಂದ  ಚಾಮರಾಜನಗರಕ್ಕೆ  ಕೊರೊನಾ ಹರಡಲಿದ್ದಾರಾ ಎಂಬ ಆತಂಕ ಚಾಮರಾಜನಗರ ಜಿಲ್ಲೆಯ ಜನರಲ್ಲಿ ಹೆಚ್ಚಾಗಿದೆ. ಕರ್ನಾಟಕ ತಮಿಳುನಾಡು ಬಾರ್ಡರ್ ಪಾಲರ್ ಬಳಿ ಅಕ್ರಮ ನುಸುಳಿವಿಕೆ ಹೆಚ್ಚಾಗಿದ್ದು, ಮಲೆ ಮಹದೇಶ್ವರ ಬೆಟ್ಟದ ದಟ್ಟ ಕಾಡಿನ ನಡುವೆ ಅಕ್ರಮ ಪ್ರವೇಶ ಗೈಯುತ್ತಿದ್ದು, ಧರ್ಮಪುರಿ, ಮೆಟ್ಟೂರು, ಸೇಲಂ ಕಡೆಯಿಂದ ಕದ್ದು ಮುಚ್ಚಿ ಜನರು ಬರುತ್ತಿದ್ದಾರೆ. ಪೋಲಿಸ್ ಚೆಕ್ ಪೋಸ್ಟ್ ಕಣ್ತಪ್ಪಿಸಿ ಅರಣ್ಯದೊಳಗಿಂದ ಅಕ್ರಮ ಪ್ರವೇಶಗೈಯ್ಯುತ್ತಿದ್ದು, ರೆಡ್ ಜೋನ್, ಹಾಟ್ ಸ್ಪಾಟಾದ ತಮಿಳುನಾಡಿನಿಂದ ಅಕ್ರಮ ಪ್ರವೇಶ ನಡೆಯುತ್ತಿದೆ. ಗ್ರೀನ್ ಝೋನ್ ಆದ ಚಾಮರಾಜನಗರದಲ್ಲಿ  ಕೊರೋನಾ ಭೀತಿ ಹೆಚ್ಚಾಗಿದೆ. ಕಳ್ಳ ದಾರಿಹೋಕರಿಕೆ ಬ್ರೇಕ್ ಬೀಳೋದು ಯಾವಾಗ ಎಂಬ ಪ್ರಶ್ನೆ ಕಾಡಿದ್ದು ಕಾದು ನೋಡುವವರೆಗೆ ಗಡಿ ಜಿಲ್ಲೆಯ ಕಥೆ ಏನಾಗಬಹುದು ಎಂಬ ಪ್ರಶ್ನೆ ಕಾಡಿದೆ. ಪೊಲೀಸ್ ಇಲಾಖೆ ಇಂತಹ ಕಳ್ಳದಾರಿಗಳ ಕಡೆಗೂ ಗಮನಹರಿಸುವಂತೆ  ಗಡಿ ಜಿಲ್ಲಾ ಜನತೆ  ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: