ಮೈಸೂರು

ಅನ್ಯಾಯ ತಡೆಯಲು ಎಲ್ಲಾ ರೈತರು ಸಂಘಟಿತರಾಗಬೇಕಿದೆ : ಕುರುಬೂರು ಶಾಂತಕುಮಾರ್

ರೈತರು ನಿತ್ಯವೂ ಬೆಲೆ ನಿಗದಿಯಲ್ಲಿ ಮಧ್ಯವರ್ತಿಗಳಿಂದ ಮೋಸ ಹೋಗುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲಾ ರೈತರು ಸಂಘಟಿತರಾಗಬೇಕಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರಿನ ಗನ್‍ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಆಯೋಜಿಸಿದ್ದ ಹಣ್ಣು ತರಕಾರಿ ಹಾಗೂ ಸೊಪ್ಪು ಬೆಳೆಗಾರರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮಧ್ಯವರ್ತಿಗಳ ಹಾವಳಿ ತಪ್ಪಿಸುವುದಕ್ಕೋಸ್ಕರ ರೈತರು ಸಂಘಟಿತರಾಗಬೇಕಿದ್ದು, ಕಾನೂನುಬದ್ಧವಾಗಿ ಹೋರಾಡಲು ಎಪ್ರಿಲ್ 4ರಂದು ಬೃಹತ್ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಬರಡನಪುರ ಎ.ನಾಗರಾಜು ,ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, , ಹಂಬಳೆ ಮಂಜುನಾಥ್ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: