ಮೈಸೂರು

ನಾಳೆ ರಂಜಾನ್ ಹಬ್ಬ ; ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ : ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ

ಮೈಸೂರು,ಮೇ.24:- ನಾಳೆ ರಂಜಾನ್ ಹಬ್ಬ ಇರುವುದರಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲವೆಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮೈಸೂರು ಮೇಯರ್ ತಸ್ನೀಂ ಪ್ರಾರ್ಥನೆಗೆ ಮನವಿ ಮಾಡಿದ್ದರು.  ಆದರೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಎಲ್ಲರೂ ಅವರವರ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ ರಂಜಾನ್ ಆಚರಿಸಬೇಕು. ಮೈಸೂರಿನ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಇಂದಿನಿಂದಲೇ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಲ್ಲಾ ಕಡೆ ಪೊಲೀಸರ ಗಸ್ತು ಕೂಡ ಇರುತ್ತದೆ. ಒಂದೇ ಕಡೆ ಹೆಚ್ಚು ಜನ ಜಮಾಯಿಸದಂತೆ ಎಚ್ಚರವಹಿಸಲಾಗಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಎಂದಿನಂತೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶವಿದೆ ಎಂದು ಪ್ರಕಾಶ್ ಗೌಡ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: