ಮೈಸೂರು

ಚುನಾವಣೆ ನ್ಯಾಯಸಮ್ಮತವಾಗಿ ನಡೆಯಲು ಮೂವರು ವೀಕ್ಷಕರ ನೇಮಕ

ನಂಜನಗೂಡು ಉಪ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಭಾರತ ಚುನಾವಣಾ ಆಯೋಗ ಇದಕ್ಕಾಗಿ ಮೂವರು ವೀಕ್ಷಕರನ್ನು ನೇಮಕ ಮಾಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಹಿರಿಯ ಐ.ಎ.ಎಸ್. ಅಧಿಕಾರಿ ಪಂಕಜ್ ಅವರು ಚುನಾವಣಾ ಸಾಮಾನ್ಯ ವೀಕ್ಷಕರಾಗಿ,
ಐ.ಆರ್.ಎಸ್. ಅಧಿಕಾರಿ ಅಮರ್‍ಜ್ಯೋತಿ ಮಜುಂದಾರ್ ಅವರು ಚುನಾವಣಾ ವೆಚ್ಚ ವೀಕ್ಷಕರಾಗಿ ಹಾಗೂ ಹಿರಿಯ ಐ.ಪಿ.ಎಸ್. ಅಧಿಕಾರಿ ಘನಶ್ಯಾಂ ಬನ್ಸಾಲ್ ಅವರು ಚುನಾವಣಾ ಪೊಲೀಸ್ವೀಕ್ಷಕರಾಗಿ ನಿಯೋಜನೆಗೊಂಡಿದ್ದು, ಈಗಾಗಲೇ ಸಾಮಾನ್ಯ ಚುನಾವಣಾ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ವೆಚ್ಚ ವೀಕ್ಷಕರು ಈ ವಾರವೇ ಆಗಮಿಸುತ್ತಿದ್ದಾರೆ ಎಂದರು.

ರಾಜಕೀಯ ಪಕ್ಷಗಳು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು
ಚುನಾವಣೆ ಸಂಬಂಧ ಯಾವುದೇ ದೂರು ಇದ್ದಲ್ಲಿ ಸಂಬಂಧಪಟ್ಟ ವೀಕ್ಷಕರಿಗೆ ಮಾಹಿತಿ
ನೀಡಬಹುದಾಗಿದೆ  ಚುನಾವಣಾ ವೀಕ್ಷಕರು ಹಾಗೂ ಅವರ ಲೈಸನ್ ಅಧಿಕಾರಿ, ಸಾಮಾನ್ಯ ವೀಕ್ಷಕ ಪಂಕಜ್ ಅವರ ದೂರವಾಣಿ ಸಂಖ್ಯೆ: 8762410983, 0821-2434311.
ಸಾಮಾನ್ಯ ವೀಕ್ಷಕರ ಲೈಸನ್ ಅಧಿಕಾರಿಯಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪ
ನಿರ್ದೇಶಕರಾದ ಮಂಜುನಾಥ್ ಅವರನ್ನು ನೇಮಿಸಿದ್ದು, ಇವರ ದೂರವಾಣಿ ಸಂಖ್ಯೆ 8277058489ಆಗಿದೆ. ಚುನಾವಣಾ ವೆಚ್ಚ ವೀಕ್ಷಕರಾದ ಅಮರ್‍ಜ್ಯೋತಿ ಮಜುಂದಾರ್ ಅವರ ದೂರವಾಣಿ ಸಂಖ್ಯೆ 0821-2434211, 8762465983. ವೆಚ್ಚ ವೀಕ್ಷಕರ ಲೈಸನ್ ಅಧಿಕಾರಿಯಾಗಿ ಮೈಸೂರು ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಲಕ್ಷ್ಮಿಕಾಂತ್ ಅವರನ್ನು ನೇಮಿಸಿದ್ದು, ಇವರ ದೂರವಾಣಿ ಸಂಖ್ಯೆ ; 94498-41216 ಆಗಿದೆ.

ಚುನಾವಣಾ ಪೊಲೀಸ್ ವೀಕ್ಷಕರಾದ ಘನಶ್ಯಾಂ ಬನ್ಸಾಲ್ ಅವರ ದೂರವಾಣಿ ಸಂಖ್ಯೆ
0821-2434511, 8762495983. ಪೊಲೀಸ್ ವೀಕ್ಷಕರಿಗೆ ಲೈಸನ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಯತೀಶ್ ಅವರನ್ನು ನೇಮಿಸಿದ್ದು, ಇವರ ದೂರವಾಣಿ ಸಂಖ್ಯೆ: 9845311406 ಆಗಿದೆ ಎಂದು ತಿಳಿಸಿದರು.

Leave a Reply

comments

Related Articles

error: