ಪ್ರಮುಖ ಸುದ್ದಿಮೈಸೂರು

ನಾನು ಹೇಳಿದ ಹಾಗೆ ತನಿಖೆ ಮಾಡಿ ಅಂತ ಹೇಳಿಲ್ಲ,ನೀವು ತನಿಖೆ ಮಾಡಿಸುತ್ತಿರುವ ರೀತಿ ಸರಿಯಲ್ಲ,ನಿಬಂಧಕರ ಬಳಿ ತನಿಖೆ ಮಾಡಿಸಿದರೆ ಪಾರದರ್ಶಕತೆ ಇರಲ್ಲ : ಶಾಸಕ ಸಾ.ರಾ.ಮಹೇಶ್ ಸ್ಪಪ್ಟನೆ

ಮೈಸೂರು,ಮೇ.25:- ನಾನು ಹೇಳಿದ ಹಾಗೆ ತನಿಖೆ ಮಾಡಿ ಅಂತ ಹೇಳಿಲ್ಲ. ಆದರೆ ನೀವು ತನಿಖೆ ಮಾಡಿಸುತ್ತಿರುವ ರೀತಿ ಸರಿಯಲ್ಲ. ನಿಬಂಧಕರ ಬಳಿ ತನಿಖೆ ಮಾಡಿಸಿದರೆ ಪಾರದರ್ಶಕತೆ ಇರಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಸ್ಪಪ್ಟನೆ ನೀಡಿದರು.

ಮೈಸೂರಿನ ತಮ್ಮ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ  ನೀವು ಹೇಳಿದ ಹಾಗೆ ತನಿಖೆ ಮಾಡಲು ಆಗಲ್ಲ‌ ಎಂದಿದ್ದ ಸಚಿವ ಎಸ್.ಟಿ.ಸೋಮಶೇಖರ್ ಅವರ ಪ್ರತಿಕ್ರಿಯೆಗೆ  ಸ್ಪಷ್ಟನೆ ನೀಡಿದ ಮಾಜಿ ಸಚಿವ ಸಾರಾ ಮಹೇಶ್. ಮೈಮುಲ್ ಬಗ್ಗೆ ಹೀಗೆ ತನಿಖೆ ಮಾಡಿ ಅಂತ ನಾನು ಒತ್ತಾಯ ಮಾಡಿಲ್ಲ. ಸರಿಯಾದ ತನಿಖೆ ಆಗಲಿ ಎಂಬುದಷ್ಟೇ ನನ್ನ‌ ಉದ್ದೇಶ. ಇದರಲ್ಲಿ ಪಾರದರ್ಶಕ ತನಿಖೆ ಆಗಿಲ್ಲ. ಅಭ್ಯರ್ಥಿಗಳಿಗೆ ಒಎಂಆರ್ ಶೀಟ್ ಕೊಟ್ಟಿಲ್ಲ. ಪರೀಕ್ಷೆ ಬರೆಯಲು ಪ್ರಶ್ನೆ ಪ್ರತ್ರಿಕೆ ಕೊಟ್ಟಿಲ್ಲ. ಪರೀಕ್ಷೆ ಮುಗಿದರು ಕೀ ಆನ್ಸರ್ ಈ ವರೆಗೂ ಬಿಟ್ಟಿಲ್ಲ ಎಂದರು.

ಹೋರಾಟ ಯಾವುದು ಎಚ್ಚರಿಕೆ ಯಾವುದು, ಬೆದರಿಸುವ ತಂತ್ರ ಯಾವುದು ಎಂಬುದು ಅವರಿಗೂ ಗೊತ್ತಿದೆ ಅಂತ ಅಂದ್ಕೋತೆನೆ. ವಿಧಾನಸೌಧದ ಒಳಗೆ ಹೋರಾಟ ಮಾಡಿದ್ವಿ. ನಿಮ್ಮ ಕಣ್ಣು ತೆರೆಸಿದ್ವಿ, ಅದಾದಮೇಲೆ ನಂತರ ತನಿಖೆ ಪ್ರಾರಂಭಿಸಿದಿರಿ, ಆದರೆ ತನಿಖೆ ಮಾಡಿರತಕ್ಕಂತಹ ರೀತಿ ಸರಿಯಲ್ಲ. ಸಹನಿಬಂಧಕರು ನೇಮಕಾತಿಯ ಸಮಿತಿಯಲ್ಲಿರುವುದರಿಂದ ನಿಬಂಧಕರ ಕೈನಲ್ಲಿ ತನಿಖೆ ಮಾಡಿಸಿದರೆ ಸತ್ಯ ಹೊರಗೆ ಬರಲ್ಲ, ಅದನ್ನು ಪಾರದರ್ಶಕವಾಗಿ ಮಾಡಿ ಅನ್ನೋ ಒತ್ತಾಯ ಮಾಡ್ತಿದ್ದೀವಿ, ಎಲ್ಲರ ಕೈಗೂ ಒಂದು ಕಾಪಿ ಕೊಟ್ಟಿದ್ದೇನೆ. ಇದು ಮೈಸೂರಿನ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾ ಸಹಕಾರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ವರಿಗೆ ಬರೆದಿರುವ ಪತ್ರ ಎಂದು ಕಾಪಿ ತೋರಿಸಿದರು.  ಎಲೆಕ್ಞನ್ ಅರ್ಜೆಂಟ್ ಅಂತ ಬರೆದಿರುವುದು. ಆದರೆ ಅಲ್ಲಿ ಏನು ಬರೆದಿದ್ದಾರೆ 13/9/2020ಕ್ಕೆ ಈ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗತ್ತೆ. ಕೂಡಲೇ ಚುನಾವಣಾಧಿಕಾರಿ ನೇಮಕ ಮಾಡಿ. ಎರಡನೆಯದು 18ಜಿ ಮಂಡಲಿಯಿಂದ ಆಯ್ಕೆಪಟ್ಟಿ ಅನುಮೋದನೆಯಾದ ನಂತರ ಮುಖ್ಯಕಾರ್ಯನಿರ್ವಕಾಧಿಕಾರಿಯು ನೇಮಕಾತಿಯ ಆದೇಶ ನೀಡಿರುತ್ತಾರೆ. ಆದಾಗ್ಯೂ ಯಾವುದೇ ಸಹಕಾರಿ ಸಂಘದ ಮಂಡಳಿಯ ಕಛೇರಿಯಲ್ಲಿ ಅವಧಿ ಮುಗಿಯುವ ಕೊನೆಯ 3ತಿಂಗಳ ಮುಂಚೆ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ಮಾಡಲಾಗುವುದಿಲ್ಲ ಇದು ಸಾ.ರಾ.ಮಹೇಶ್ ಹೇಳಿರೋದಲ್ಲ, ಆ್ಯಕ್ಟ್, ಇದರಂತೆ ಮಾಡಿ. ಕಾನೂನು ಸಾ.ರಾ.ಮಹೇಶ್ ದಲ್ಲ. ಉಸ್ತುವಾರಿ ಸಚಿವ ಸೋಮಶೇಖರ್ ಅವರದ್ದೂ ಅಲ್ಲ, ಪಾರದರ್ಶಕ ಪ್ರಕ್ರಿಯೆ ಆಗಿಲ್ಲ. ಏಜೆನ್ಸಿಗೆ ಟೆಂಡರ್ ಕೊಡುವಾಗ ಅವರಿಗೆ ವಹಿಸುವಂತ ಸಂದರ್ಭ ಪಾರದರ್ಶಕತೆ ಇರಲಿಲ್ಲ. ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಟ್ಟಿಲ್ಲ. ಅಭ್ಯರ್ಥಿಗಳಿಗೆ ಒಎಂ ಆರ್ ಶೀಟ್ ಕೊಟ್ಟಿಲ್ಲ. ಇಲ್ಲಿಯವರೆಗೆ ಕೀ ಆನ್ಸರ್ ಬಿಟ್ಟಿಲ್ಲ. ವೆಬ್ ಸೈಟ್ ಲ್ಲಿ ರಿಸಲ್ಟ್ ಹಾಕಿಲ್ಲ ಇದು ನಮ್ಮ ಹೋರಾಟ ಎಂದು ವಾಗ್ದಾಳಿ ನಡೆಸಿದರು.

ನಮ್ಮ ನಾಯಕ ಕುಮಾರಣ್ಣ ನನ್ನನ್ನು ಸಚಿವರನ್ನಾಗಿ ಮಾಡಿದ್ದರು. ಮಡಿಕೇರಿಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರೂ, ಏನು ಕೆಲಸ ನನ್ನ ಕೈಲಾದಷ್ಟು ಮಾಡಿದ್ದೇನೆ ಎನ್ನುವುದು ಮಡಿಕೇರಿಗೆ ಹೋದರೆ ಗೊತ್ತಾಗತ್ತೆ ಎಂದರು. 20ಲಕ್ಷ ಹಣವನ್ನು ಕೊಟ್ಟಿದ್ದು ನನ್ನ ಗಮನಕ್ಕೆ ತಂದಾಗಲೂ ನಾನು ಸುಮ್ಮನಿರಬೇಕಾ? ಧ್ವನಿ ಎತ್ತುವುದು ತಪ್ಪಾ ಎಂದು ಪ್ರಶ್ನಿಸಿದರು.

ಇವತ್ತಿನಿಂದ ಹೋರಾಟ ಮಾಡ್ತಿಲ್ಲ. ರೇಸ್ ಕೋರ್ಸ್ ಹೋರಾಟ ಮಾಡಿದೆ. 75ಸಾವಿರ ಕಟ್ಟುತ್ತಿದ್ದರು. ಈಗ ಪ್ರತಿವರ್ಷ 2ಕೋಟಿ ರೂ.ಕಟ್ಟುತ್ತಿದ್ದಾರೆ. ಇಲ್ಲಿಯವರೆಗೆ 15ಕೋಟಿಗಿಂತ ಹೆಚ್ಚು ಹಣ ಸರ್ಕಾರಕ್ಕೆ ತರುವ ಕೆಲಸ ಮಾಡಿದ್ದೇವೆ. ಅನಧಿಕೃತ ಕಟ್ಟಡ ಕಟ್ಟಡ ತೆರವು ಮಾಡಿದ್ದೇವೆ. ರಿನ್ಯುವಲ್ ಸಂದರ್ಭ ಮಂಜೂರಾತಿ ಕೊಡಿಸಿಲ್ಲ, ಅಲ್ಲೂ ಕೂಡ 50ಮೆಂಬರ್ ಕೊಡ್ತೇವೆ ಅಂತ ಮಂಜೂರಾತಿ ಆಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ.    ಸತ್ಯ ಇಲ್ಲ ಅಂತ ಗೊತ್ತಾದರೆ ಹೋರಾಟವನ್ನು ಯಾವ ಕಾರಣಕ್ಕೂ ನಿಲ್ಲಿಸಲ್ಲ. ಆ್ಯಕ್ಟ್ ಅಡಿ ಮಾಡಿ, ಕಾನೂನು ಅಡಿ ಮಾಡಿ. ಇದನ್ನೇ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ನಮ್ಮ ಸರ್ಕಾರ ಇದೆ. ನಾವು ಮಾಡಿದ್ದೇ ಸರಿ ಅನ್ನೋದಾದರೆ ಅನಿವಾರ್ಯವಾಗಿ ಮೈಸುರು ಜಿಲ್ಲೆಯ ಎಲ್ಲ ನಮ್ಮ ಮುಖಂಡರು ಕುಮಾರ ಅಣ್ಣ ನೇತೃತ್ವ ದಲ್ಲಿ ನಾವೆಲ್ಲ ಹೋರಾಟ ಮಾಡ್ತೀವಿ ಅಂತ ಹೇಳಿದ್ದೇವೆ.  ಸಂದರ್ಶನ ಆರಂಭಿಸಲಿ ನಾವೇ ಕೆಲವು ಲಿಸ್ಟ್ ಬಿಡುತ್ತೇವೆ. ಬೆಳಿಗ್ಗೆ ಸಂದರ್ಶನ. ಪ್ರಕ್ರಿಯೆ ಯಾವಾಗ ಮುಗಿಯತ್ತೆ, ಲಿಸ್ಟ್ ನಲ್ಲಿ ಇಂತಹವರೇ ಆಯ್ಕೆ ಆಗ್ತಾರೆ ಅಂತ ಬಿಡ್ತೇವೆ. ಇನ್ನೂ ಮೂರು ತಿಂಗಳು 14ದಿನವಿದೆ ಅವಧಿ. ಒಂದು ದಿನಕ್ಕೆ 40ಜನರ ಸಂದರ್ಶನ ಮಾಡಿದರೆ. ಕೋವಿಡ್ ಇರೋದರಿಂದ 50ಜನ ಸೇರಂಗಿಲ್ಲ. ಶನಿವಾರ ಭಾನುವಾರ ಎರಡನೇ ಶನಿವಾರ ಕಳೆದರೆ ಎರಡು ತಿಂಗಳು ಬೇಕು ಸಂದರ್ಶನ ಮಾಡಲು.  ನೀವೇ ಕಾನೂನು ಮಾಡಿ ನೀವೇ ಗಾಳಿಗೆ ತೂರ್ತಿರಾ? ತನಿಖೆ ನಡೆಯುತ್ತಿರಬೇಕಾದರೆ ಪ್ರಕ್ರಿಯೆಯಲ್ಲಿ ಲೋಪವಿದೆ ಅಂತ ಗೊತ್ತಲ್ಲವಾ ಪಾರದರ್ಶಕವಾಗಿ ಮಾಡಬೇಕಲ್ವಾ? ಅಂದರೆ ನೀವು ಒತ್ತಡಕ್ಕೆ ಮಣಿಯುತ್ತಿದ್ದೀರಿ. ಸಚಿವರರಿರಲಿ, ಶಾಸಕರಿರಲಿ ಕಾನೂನಿನ  ಕೆಳಗಡೆ ಇರಬೇಕು, ಹೇಂಗ್ ಮಾಡ್ತೀರಿ, ಹೇಳಬೇಕಲ್ಲ ಅದಕ್ಕೆ ದಾಖಲಾತಿ ಸಮೇತ ಇಡುತ್ತಿದ್ದೇನೆ ಎಂದರು.

ಬಹಿರಂಗವಾಗಿ ಪದಬಳಕೆ ಮಾಡುವಾಗ ಸ್ವಲ್ಪ ಗಮನದಲ್ಲಿ ಇರಲಿ : ಜಿ.ಟಿ.ದೇವೇಗೌಡರಿಗೆ  ತಿರುಗೇಟು 

ಜಿ.ಟಿ ದೇವೇಗೌಡ ಅವರು ಮೈಮುಲ್ ತಂಟೆಗೆ ಹೋಗಬೇಡ ಎಂದು ಬಹಿರಂಗವಾಗಿ ಹೇಳಲಿ. ನಾನು ನಮ್ಮ ಹಿರಿಯ ನಾಯಕರ ಮಾತನ್ನು ಮೀರೋದಿಲ್ಲ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಜಿ.ಟಿ.ದೇವೇಗೌಡರಿಗೆ ಟಾಂಗ್​ ನೀಡಿದರು.

ನನ್ನನ್ನು ಕೂಡ ನನ್ನ ಕ್ಷೇತ್ರದ ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಬಹಿರಂಗವಾಗಿ ಪದಬಳಕೆ ಮಾಡುವಾಗ ಸ್ವಲ್ಪ ಗಮನದಲ್ಲಿ ಇರಲಿ. ಯಾಕಂದರೆ, ನನ್ನ ಕ್ಷೇತ್ರದ ಜನರಿಗೆ ಬೇಸರವಾಗುತ್ತೆ. ಜಿಟಿದೇವೇಗೌಡ ಅವರು ನನ್ನನ್ನು ಕರೆದು ಏನು ಬೇಕಾದರು ಮಾತಾಡಲಿ. ಅವರಿಗೆ ನನ್ನ ಬಗ್ಗೆ ಮಾತಾನಾಡುವ ಹಕ್ಕಿದೆ. ಬಹಿರಂಗವಾಗಿ ಮಾತನಾಡುವಾಗ ಪದಬಳಕೆ ಸರಿ ಇರಲಿ ಎಂದು   ತಿರುಗೇಟು ನೀಡಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: