ಕರ್ನಾಟಕಮನರಂಜನೆ

ಮೇ 12ರಂದು ಸಪ್ತಪದಿ ತುಳಿಯಲಿದ್ದಾರೆ ನಟಿ ಅಮೂಲ್ಯ

ಚಂದನವನದ ಚೆಲುವೆ ನಟಿ ಅಮೂಲ್ಯ ಆದಿಚುಂಚನಗಿರಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮೇ. 12ರಂದು ಸಪ್ತಪದಿ ತುಳಿಯಲಿದ್ದಾರೆ.

ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಕುಟುಂಬ ವರ್ಗದವರ ಜೊತೆಗೆ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅಮೂಲ್ಯ ಹಾಗೂ ಜಗದೀಶ್ ವಿವಾಹ ನಡೆಯಲಿದೆ.

ಮದುವೆ ಮುಗಿದು ನಾಲ್ಕು ದಿನಗಳ ಬಳಿಕ ಮೇ 16ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಆದರೆ ಸದ್ಯಕ್ಕೆ ರಿಸೆಪ್ಷನ್ ನಡೆಯುವ ಸ್ಥಳ ಇನ್ನೂ ನಿಗದಿಯಾಗಿಲ್ಲ. ಇದೇ ಮಾರ್ಚ್ 6ರಂದು ಅಮೂಲ್ಯ ಹಾಗೂ ಜಗದೀಶ್ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಅಮೂಲ್ಯ ಹಾಗೂ ಜಗದೀಶ್ ಮದುವೆ ಮಾತುಕತೆಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಮುನ್ನುಡಿ ಬರೆದಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: