ಪ್ರಮುಖ ಸುದ್ದಿಮನರಂಜನೆ

ವಲಸೆ ಕಾರ್ಮಿಕರಿಗೆ ನಟ ಸೋನು ಸೂದ್ ಸಹಾಯ; ನಿಮ್ಮ ಬಗ್ಗೆ ಹೆಮ್ಮೆ ಇದೆ : ಸಚಿವೆ ಸ್ಮೃತಿ ಇರಾನಿ ಶ್ಲಾಘನೆ

ದೇಶ(ನವದೆಹಲಿ)ಮೇ.25:-  ಕೊರೋನಾ ವೈರಸ್‌ನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಇದ್ದು, ಇಂತಹ ಪರಿಸ್ಥಿತಿಯಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರನ್ನು ಸ್ವತಃ ಬಸ್ ಮಾಡಿಸಿ ಅವರವರ ಊರುಗಳಿಗೆ ತೆರಳಲು ಸಹಾಯ ಮಾಡಿದ ಬಾಲಿವುಡ್ ನಟ ಸೋನು ಸೂದ್ ಅವರ ಕಾರ್ಯಕ್ಕೆ ಸಚಿವೆ ಸ್ಮೃತಿ ಇರಾನಿ ಶ್ಲಾಘಿಸಿದ್ದಾರೆ.

ಸೋನು ಸೂದ್ ವಲಸೆ ಕಾರ್ಮಿಕರನ್ನು ಬಸ್‌ಗಳ ಮೂಲಕ ತಮ್ಮ ಮನೆಗಳಿಗೆ ಕಳುಹಿಸುವ ಕೆಲಸ ಮಾಡಿದ್ದರು. ಸಚಿವೆ ಸ್ಮೃತಿ ಇರಾನಿ ಸೋನು ಸೂದ್ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದು  “ಕಳೆದ ಎರಡು ದಶಕಗಳಿಂದ ನಿಮ್ಮನ್ನು ವೃತ್ತಿಪರವಾಗಿ ತಿಳಿದುಕೊಳ್ಳುವ ಭಾಗ್ಯ ನನಗೆ ಸಿಕ್ಕಿದೆ. ಈಗ ಸೋನು ಸೂದ್ ಅವರನ್ನು ನಟ ಎಂದು ಗುರುತಿಸಲಾಗುತ್ತದೆ. ಆದರೆ ಇಂತಹ ಸಂಕಷ್ಟದ ಸವಾಲಿನ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ನೀವು ತೋರಿಸಿದ ದಯೆಯ ಬಗ್ಗೆ ನನಗೆ ಹೆಮ್ಮೆ ಇದೆ. ಅಗತ್ಯವಿರುವವರಿಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಬರೆದಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದರು. ಅವರ  ನಡೆಯನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: