ಮೈಸೂರು

ಕಲ್ಯಾಣಗಿರಿ ನಿವಾಸಿ ಮೇರಿ ಜಾಸ್ಮಿನ್ ಡವ್ ನಿಧನ

ಮೈಸೂರು,ಮೇ 25-ಕಲ್ಯಾಣಗಿರಿಯ ನಿವಾಸಿ ಮೇರಿ ಜಾಸ್ಮಿನ್ ಡವ್ (62) ಅವರು ನಿನ್ನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಮೃತರು ಪತಿ ಅರ್ಲ್ ಡವ್, ಮಗಳು ಐರೀನ್ ಡವ್ ಮತ್ತು ಮಗ ಜಾಯ್ ಆಂಥೋನಿ ಡವ್, ಸೊಸೆ ಫ್ಲೋರಿಟಾ ಮತ್ತು ಮೊಮ್ಮಗಳು ಮಿಕೇಲಾ ಡವ್ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗಾಂಧಿನಗರದ ಮಹಾದೇವಪುರ ರಸ್ತೆಯಲ್ಲಿರುವ ಕ್ಯಾಥೊಲಿಕ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

ಸಮುದಾಯದ ಪರವಾಗಿ, ಅಖಿಲ ಭಾರತ ಆಂಗ್ಲೋ-ಇಂಡಿಯನ್ ಅಸೋಸಿಯೇಶನ್ (ಎಐಎಐಎ) ಮೈಸೂರು ಶಾಖೆಯ ಅಧ್ಯಕ್ಷ ಮಿಚೆಲ್ ಸುರೇಶ್ ಮತ್ತು ಸಮಿತಿ ಸದಸ್ಯರು ಮೇರಿ ಜಾಸ್ಮಿನ್ ಡವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. (ಎನ್ ಜಿಬಿ, ಎಂ.ಎನ್)

 

 

Leave a Reply

comments

Related Articles

error: