ಪ್ರಮುಖ ಸುದ್ದಿ

ಏರ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ : ಮಧ್ಯದ ಸೀಟ್ ಖಾಲಿ ಬಿಡುವಂತೆ ಸೂಚನೆ

ದೇಶ(ನವದೆಹಲಿ)ಮೇ.26:-  ಕೊರೊನಾ ವೈರಸ್ ಪ್ರಕೋಪದ ಮಧ್ಯೆಯೇ ಕೇಂದ್ರ ಮತ್ತು ಏರ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಈ ಕುರಿತು ಏರ್ ಇಂಡಿಯಾಗೆ ಆದೇಶ ನೀಡಿರುವ ಸರ್ವೋಚ್ಛ ನ್ಯಾಯಾಲಯ ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಏರ್ ಇಂಡಿಯಾ ವಿಮಾನಗಳಲ್ಲಿ ಮಧ್ಯದ ಸೀಟ್ ಖಾಲಿ ಬಿಡುವಂತೆ ಬಾಂಬೆ ಹೈ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವಂತೆ ನ್ಯಾಯಪೀಠ ಆದೇಶಿಸಿದೆ. ಆದರೆ, ಮುಂದಿನ 10 ದಿನಗಳವರೆಗೆ ವಿಮಾನದಲ್ಲಿ ಎಲ್ಲಾ ಆಸನಗಳಲ್ಲಿ ಪ್ರಯಾಣಿಕರನ್ನು ಕೂರಿಸಲು ನ್ಯಾಯಾಲಯ ಅನುಮತಿ ನೀಡಿದೆ ಎನ್ನಲಾಗಿದೆ.

ಈ ಕುರಿತು ಕೇಂದ್ರ ಸರ್ಕಾರವನ್ನೂ ಕೂಡ ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠ, ನಿಮಗೆ ಕೇವಲ ನಿಮ್ಮ ಏರ್ ಲೈನ್ಸ್ ಕಾಳಜಿ ಇದ್ದು, ಯಾತ್ರಿಗಳ ಆರೋಗ್ಯದ ಕಾಳಜಿ ನಿಮ್ಮ ಪ್ರಮುಖ ಆದ್ಯತೆ ಆಗಿರಬೇಕು. ಒಂದು ವೇಳೆ ಎಲ್ಲಾ ಆಸನಗಳಲ್ಲಿ ಯಾತ್ರಿಗಳು ಕುಳಿತರೆ ಸೋಂಕು ಪಸರಿಸುವ ಅಪಾಯ ಹೆಚ್ಚಾಗಿರುತ್ತದೆ. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಪಟ್ಟು ಬಿಗಿಗೊಳಿಸಿರುವ ಮುಖ್ಯ ನ್ಯಾಯಮೂರ್ತಿಗಳು, ಇದೊಂದು ವಿಮಾನವಾಗಿದ್ದು, ಇದರಲ್ಲಿ ಯಾತ್ರಿಗಳಿಗೆ ಸೋಂಕು ಪಸರಿಸಬಾರದು ಎಂಬುದು ವೈರಸ್ ಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.ಇದಕ್ಕೂ ಮೊದಲು ವಿದೇಶಗಳಿಂದ ಬರುವ ವಿಮಾನಗಳಲ್ಲಿ ಮಧ್ಯದ ಸೀಟ್ ಅನ್ನು ಖಾಲಿ ಇರಿಸುವಂತೆ ಬಾಂಬೆ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ಏರ್ ಇಂಡಿಯಾ ಸಂಸ್ಥೆ ಸುಪ್ರೀಂ ಮೆಟ್ಟಿಲೇರಿದ್ದವು.

ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎಲ್ಲಾ ಆಸನಗಳ ಮಧ್ಯದ ಆಸನವನ್ನು ಖಾಲಿ ಇಡಲು ಬಾಂಬೆ ಹೈ ಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲ ಈ ಕುರಿತು ಏರ್ ಇಂಡಿಯಾಗೆ ಸೂಚನೆ ನೀಡಿದ್ದ ನ್ಯಾಯಪೀಠ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ ಡಿಜಿಸಿಎ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಲು ಹೇಳಿತ್ತು. ಡಿಜಿಸಿಎ ಮಾರ್ಗಸೂಚಿಗಳ ಅನುಸಾರ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಧ್ಯದ ಸೀಟ್ ಗಳನ್ನು ಖಾಲಿ ಇರಿಸುವುದು ಅನಿವಾರ್ಯ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ವಿದೇಶಗಳಿಂದ ಬರುವ ವಿಮಾನಗಳಲ್ಲಿ ಮಧ್ಯದ ಸೀಟ್ ಅನ್ನು ಖಾಲಿ ಇರಿಸುವಂತೆ ಬಾಂಬೆ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ಏರ್ ಇಂಡಿಯಾ ಸಂಸ್ಥೆ ಸುಪ್ರೀಂ ಮೆಟ್ಟಿಲೇರಿದ್ದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: