ಪ್ರಮುಖ ಸುದ್ದಿ

ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 10 ಸಾವಿರ ರೂ.ಗಳನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಿ : ಮಲ್ಲಿಕಾರ್ಜುನ ಖರ್ಗೆ  ಸಲಹೆ

ರಾಜ್ಯ(ಬೆಂಗಳೂರು)ಮೇ.26:-  ಕೇಂದ್ರ ಸರ್ಕಾರ ಕೋವಿಡ್-19 ಸಂಕಷ್ಟದಿಂದ ಜನರನ್ನು ಪಾರು ಮಾಡಲು ಘೋಷಿಸಿರುವ 20 ಲಕ್ಷ ಕೋಟಿ ಪರಿಹಾರ ಯಾರಿಗೂ ಪ್ರಯೋಜನಕ್ಕೆ ಬರದಂತಿದ್ದು,   ವಲಸೆ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕುವುದರಿಂದ ಅವರಿಗೆ ಸಹಾಯವಾದಂತಾಗುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 10 ಸಾವಿರ ರೂ.ಗಳನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಿ ಎಂದು   ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ  ಸಲಹೆ ನೀಡಿದ್ದಾರೆ.

ಇದರಿಂದ ವಲಸೆ ಕಾರ್ಮಿಕರು  ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗುವುದಲ್ಲದೇ ಆರ್ಥಿಕತೆಗೆ ಉತ್ತೇಜನವೂ ದೊರೆಯಲಿದೆ. ವಲಸೆ ಕಾರ್ಮಿಕರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವಂತೆ ದೇಶದ ಪ್ರಮುಖ ಉದ್ಯಮಿಗಳು ಶಿಫಾರಸ್ಸು ಮಾಡುವಂತೆ  ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: