ಪ್ರಮುಖ ಸುದ್ದಿಮೈಸೂರು

ಜ್ಯುಬಿಲಿಯಂಟ್ ಜೆನರಿಕ್ ಕಂಪನಿಯ ಪರ ಬಿಜೆಪಿ ಕೇಂದ್ರ ನಾಯಕರ ಲಾಭಿ : ತನಿಖೆಗೆ ಸೂಕ್ತ ವ್ಯಕ್ತಿಯನ್ನು ನೇಮಿಸಿ. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ ; ಕಾಂಗ್ರೆಸ್ ಎಚ್ಚರಿಕೆ

ಮೈಸೂರು,ಮೇ.26:- ಜ್ಯುಬಿಲಿಯಂಟ್ ಜೆನರಿಕ್ ಕಂಪನಿಯ ಪರ ಬಿಜೆಪಿ ಕೇಂದ್ರ ನಾಯಕರ ಲಾಭಿ ನಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಧರ್ಮಸೇನಾ ಆರೋಪಿಸಿದರು.

ಮೈಸೂರು ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಯಶಸ್ವಿಯಾಗಿ ಕೊರೋನಾ ತಡೆಗಟ್ಟಿದ ಮೈಸೂರಿನ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆದರೆ ಜ್ಯುಬಿಲಿಯಂಟ್ ನಿಂದ ಮೈಸೂರಿಗೆ ಕೊರೋನಾ ಬಂದಿತ್ತು. ಬಹುತೇಕ ಮೈಸೂರಿನ ಕೊರೋನಾ ಸೋಂಕಿತರು ಜ್ಯುಬಿಲಿಯಂಟ್ ನಂಟು ಹೊಂದಿದ್ದವರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ   ಕಾರ್ಖಾನೆ ಬಗ್ಗೆ ಕ್ರಮದ ಮಾತುಗಳನ್ನಾಡಿದ್ದರು ಎಂದ ಧರ್ಮಸೇನಾ ಜ್ಯುಬಿಲಿಯಂಟ್ ಬಗ್ಗೆ ಬಿಜೆಪಿಯ ಧೋರಣೆ ಕುರಿತು ಖಂಡಿಸಿದರು. ಆ ಕಂಪನಿ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚಿಲ್ಲ. 10 ಗ್ರಾಮ ದತ್ತು ಹಾಗೂ 50 ಸಾವಿರ ಕಿಟ್ ಯಾರಿಗೆ ಕೊಡ್ತಾರೆ ? ಸ್ಥಳೀಯ ಬಿಜೆಪಿಯ ಶಾಸಕರೇ ಗೊಂದಲದ ಗೂಡಾಗಿದ್ದಾರೆ. ಈ ವಿಚಾರವಾಗಿ ನೀವು ನಿಮ್ಮ ರೀತಿಯಲ್ಲೇ ನಡೆದುಕೊಂಡರೆ ನಾವು ಸದನದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಜಿಲ್ಲಾ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿ ಕ್ರಮಕ್ಕೆ ಮುಂದಾಗುತ್ತೇವೆ. ಸಿದ್ದರಾಮಯ್ಯ, ಡಿಕೆಶಿ, ಹಾಗೂ ಎಲ್ಲಾ ನಾಯಕರು ಜೊತೆಗೂಡಿ ಹೋರಾಟ ನಡೆಸುತ್ತೇವೆ. ಸತ್ಯಾಸತ್ಯತೆ ಹೊರಗೆ ಬರಲೇ ಬೇಕು. ಸುರೇಶ್ ಕುಮಾರ್ ವಿದೇಶದಿಂದ ಬಂದವರಿಂದಲೇ ಕೊರೋನಾ ಬಂದಿದೆ ಎಂದಿದ್ದಾರೆ. ಈ ಕುರಿತು ನಮಗೆ ಅನುಮಾನ ಜಾಸ್ತಿಯಾಗಿದೆ, ಸ್ಥಳೀಯರು ಕೂಡ ಅಸಮಾಧಾನಗೊಂಡಿದ್ದಾರೆ. ಕಂಪನಿಯ ಮೇಲೆ ಕ್ರಮ ಇಲ್ಲವೆಂದರೆ ನಾವು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದರು.

ಜನರ ಪರವಾಗಿ ನಾವು ಕೆಲಸ ಮಾಡುತ್ತೇವೆ. ನಿಮ್ಮ ರಾಜಕೀಯ ರಾಜಕಾರಣ  ಗೊತ್ತಿದೆ ಎಂದ ಅವರು ಸಿಬಿಐಗೆ ವಹಿಸುವಂತೆ ಧೃವ ನಾರಾಯಣ್ ಮಾತಿಗೆ ಬೆಂಬಲ ಸೂಚಿಸಿದರು. ಬಿಜೆಪಿಯ ಶಾಸಕರೇ ವಿರೋಧ ಪಕ್ಷದ ಕೆಲಸ ಮಾಡುವಾಗ ನಾವು ಧ್ವನಿಗೂಡಿಸುತ್ತೇವೆ. ಅವರು ಜನಪರ ಧ್ವನಿ ಎತ್ತಿದ್ದಾರೆ ಎಂದು ಶಾಸಕ ಹರ್ಷವರ್ಧನ್ ಪರ ಮಾತನಾಡಿದರು. ಈ ಪ್ರಕರಣ ಮೊದಲು ಕಾಣಿಸಿಕೊಂಡಾಗ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಂದಿನ ಉಸ್ತುವಾರಿ ಸಚಿವರು ಹೇಳಿದ್ದರು. ಆದರೆ ಅವರನ್ನೇ ಉಸ್ತುವಾರಿ ಸ್ಥಾನದಿಂದ ಬದಲಾವಣೆ ಮಾಡುತ್ತಾರೆ. ಜೊತೆಗೆ ಸಾಕಷ್ಟು ನಾಯಕರು ಈ ವಿಚಾರದಲ್ಲಿ ಭಿನ್ನ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ತನಿಖೆ ಮಾಡಲಿಲ್ಲ ಎಂದರೆ ನಾವು ಸದನದಲ್ಲಿ ಪ್ರಶ್ನೆ ಮಾಡುತ್ತೇವೆ. ತನಿಖೆಗೆ ಸೂಕ್ತ ವ್ಯಕ್ತಿಯನ್ನು ನೇಮಿಸಿ. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಪ್ರಾರಂಭ ಮಾಡಲಿದ್ದೇವೆ ಎಂದರು.

ಕೊರೋನಾ ವೈರಸ್ ವಿಶ್ವವನ್ನೇ ತಲ್ಲಣಗೊಳಿಸಿದ ವೈರಸ್. ಆದರೆ ಮೈಸೂರಿಗೆ ಕೊರೋನಾ ಎಲ್ಲಿಂದ ಬಂತು ಎನ್ನುವು ಪ್ರಮುಖವಾಗಿದೆ. ಮೈಸೂರಿನಲ್ಲಿ ಕಾಣಿಸಿಕೊಂಡ ವೈರಸ್ ಬಹುತೇಕ ನಂಜನಗೂಡಿ‌ನ ಜ್ಯುಬಿಲಿಯಂಟ್ ನಿಂದಲೇ ಬಂದಿದ್ದನ್ನು ಗಮನಿಸಿದ್ದೇವೆ. ಇದರ ಕುರಿತು ನಾವು ಸಮಗ್ರ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ತಮ್ಮ ಮಾತನ್ನು ತಾವೇ ಮುರಿದಿದ್ದಾರೆ. ಬಿಜೆಪಿಯವರು ತಾವು ವಿರೋಧ ಪಕ್ಷದಲ್ಲಿ ಇದ್ದಿದ್ದರೇ ಈ ಪ್ರಕರಣದ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದರು. ಆದ್ರೇ ತಾವೇ ಅಧಿಕಾರದಲ್ಲಿ ಇದ್ದು ಪ್ರಕರಣ ಕುರಿತು ತಾವುದೇ ರೀತಿಯಲ್ಲಿ ತನಿಖೆ ಮಾಡಿಸುತ್ತಿಲ್ಲ. ಈ ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಸದಸ್ಯರಾಗಿ ನಾವು ಇದನ್ನು ಪ್ರಶ್ನೆ ಮಾಡುತ್ತೇವೆ. ಈ ಪ್ರಕರಣದ ಕುರಿತು ಸ್ಥಳಿಯ ಶಾಸಕರೇ ಈ ವಿಚಾರವಾಗಿ ಭಿನ್ನ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ‌. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ ಎಂದರು.

ವಿಶಾಖಪಟ್ಟಣದಲ್ಲಿ ವಿಷಾನಿಲ ಘಟನೆ ನಡೆಯಿತು. ಅದಕ್ಕೆ 50ಕೋಟಿ ದಂಡ ವಿಧಿಸಿದ್ದಾರೆ. ಜ್ಯುಬಿಲಿಯೆಂಟ್ ವಿಚಾರಣೆ ಮಾಡ್ತೇವೆ ಅಂದರು. ವಿಚಾರಣೆಗೆ  ನೇಮಕ ಮಾಡಿದ್ದು ಯಾರೂ ಗೊತ್ತಿಲ್ಲ. ಏನು ವರದಿ ಮಾಡಿದರು ಗೊತ್ತಿಲ್ಲ. ಅವರು ಬಂದರು ಏನು ವರದಿ ಮಾಡಿದರು ಗೊತ್ತಿಲ್ಲ.  ಯಾಕೆ ಅರ್ಧಕ್ಕೆ ನಿಂತಿತು ಗೊತ್ತಿಲ್ಲ. ವರದಿ ಮಾಡಿದಾರೆ ಅಂತನೇ ಗೊತ್ತಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿಜೆ.ವಿಜಯ್ ಕುಮಾರ್ ಮಾತನಾಡಿ  ಈ ವಿಷಯದಲ್ಲಿ ದೆಹಲಿ ಸರ್ಕಾರದ ಲಾಭಿ ಇದೆ. ನಗರ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಹೋರಾಟ ಮಾಡುತ್ತೆ. ಪಕ್ಷದ ವಿಚಾರವಾಗಿ ಕೈಗೆತ್ತುಕೊಳ್ಳುವಂತೆ   ಪ್ರತಿಪಕ್ಷ ನಾಯಕ ಹಾಗೂ ಅಧ್ಯಕ್ಷರಾದ ಡಿಕೆಶಿವಕುಮಾರ್ ಗೆ, ಎಸ್ ಆರ್ ಪಾಟೀಲ್ ಗೆ ಮನವಿ ಮಾಡಲಾಗುವುದು ಎಂದರು.  ಪ್ರಪಂಚಕ್ಕೆ ಕೊರೋನಾ ಹರಡಿದ ಹಿನ್ನೆಲೆ ಚೀನಾ ರಾ ಮೆಟೀರಿಯಲ್ ಸರಬರಾಜು ಮಾಡುತ್ತದೆ. ಜ್ಯುಬಿಲಿಯಂಟ್ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ರಾ ಮೆಟೀರಿಯಲ್ ಸರಬರಾಜು ಮಾಡುತ್ತದೆ. ಪಿ.52  ಯಾರ ಜೊತೆನೂ ಮಾತಾಡಿಲ್ಲ ಎನ್ನುತ್ತಾರೆ. ಚೀನಾದ ವಿಸಿಟರ್ ಜೊತೆ ಒಡನಾಟವಿದೆ ಎನ್ನಲಾಗುತ್ತದೆ. ಮೆಡಿಕಲ್ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿದೆ. ಕೇಂದ್ರದ ದೊಡ್ಡ ನಾಯಕರು ಇದರ ಹಿಂದೆ ಇದ್ದಾರೆ. ಈ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಸೋಮಣ್ಣ ನವರನ್ನು ಉಸ್ತುವಾರಿಯಿಂದ ಕೈ ಬಿಡಲಾಯಿತು. ಬಿಜೆಪಿಯ ನಾಯಕರ ಭಿನ್ನ ಭಿನ್ನ ಹೇಳಿಕೆ ಇದಕ್ಕೆ ಕಾರಣ.  ಜ್ಯುಬಿಲಿಯಂಟ್ ಈಗ ಪ್ರಾರಂಭವಾಗಿದೆ ಒಳ್ಳೇದು ಆದರೆ ಆ ಬಗ್ಗೆ ತನಿಖೆಯಾಗಬೇಕು. ಪಿ.52 ರ ಪಾತ್ರವೇನು? ಅವರನ್ನೇಕೆ ಮುಚ್ಚಿಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಕೊರೋನಾ ಮೂಲದ ಬಗ್ಗೆ ಎಲ್ಲಾ ದೇಶಗಳು ತಲೆ ಕೆಡಿಸಿಕೊಂಡಿದೆ. ಚೀನಾ ಬಗ್ಗೆ ಸ್ವತಃ ಟ್ರಂಪ್ ಮಾತನಾಡಿದ್ದಾರೆ. ಇದಕ್ಕೆ ಸಮಗ್ರ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಲಿಲ್ಲ. ಅಂದರೆ ಕಾಂಗ್ರೆಸ್ ಸದನದ ಹೊರಗೆ ಹಾಗೂ ಸದನದ ಒಳಗೆ ಹೋರಾಟಕ್ಕೆ ಸಿದ್ಧ. ನಮ್ಮ ಪ್ರಧಾನಿ ಬಿಜೆಪಿಯ ಪ್ರಧಾನಿ ತರ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಮೋದಿ ಹಾಗೂ ಯಡಿಯೂರಪ್ಪ ನವರಿಗೆ ಕೊಟ್ಟಂತಹ ಸಫೋರ್ಟ್ ನ ಯಾರಿಗೂ ಕೊಟ್ಟಿಲ್ಲ. ಆದರೆ ಇದನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: