ಮೈಸೂರು

5000 ರೂಗಳ ಪರಿಹಾರ ಧನದ ಅರ್ಜಿಯನ್ನು ಉಚಿತವಾಗಿ ಸಲ್ಲಿಸುವ ತಾತ್ಕಾಲಿಕ ಸೇವಾ ಕೇಂದ್ರದ ಉದ್ಘಾಟನೆ

ಮೈಸೂರು,ಮೇ.26:- ಟೀಂ ಮೈಸೂರು ತಂಡದಿಂದ ‌ಇಂದು‌ ಇಟ್ಟಿಗೆಗೂಡಿನ ಜ್ವಾಲಾಮುಖಿ ವೃತ್ತದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ನೀಡುತ್ತಿರುವ  5000 ರೂಗಳ ಪರಿಹಾರ ಧನದ ಅರ್ಜಿಯನ್ನು ಉಚಿತವಾಗಿ ಸಲ್ಲಿಸುವ ತಾತ್ಕಾಲಿಕ ಸೇವಾ ಕೇಂದ್ರದ ಉದ್ಘಾಟನೆಯನ್ನು  ಬಿಜೆಪಿ ಮೈಸೂರು ನಗರಾಧ್ಯಕ್ಷರಾದ ಶ್ರೀವತ್ಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು  ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಸಹಾಯಧನ ಚಾಲಕರಿಗೆ ದೊರಕಬೇಕು. ಆದರೆ ಕೆಲ ಮಧ್ಯವರ್ತಿಗಳು ಚಾಲಕರಿಂದ ಹಣ ಸುಲಿಗೆ ಮಾಡುತ್ತಿರುವುದು ಕಂಡು ಬಂದಿತ್ತು. ಈ  ರೀತಿ ಟೀಂ ಮೈಸೂರು ಇಂತಹ ಸಂಘಟನೆಗಳು ಈ ರೀತಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಸಲ್ಲಿಸಲು ಸಹಕರಿಸಿದ್ದರಿಂದ ತುಂಬಾ ಉಪಯೋಗವಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು

ನಗರ ಪಾಲಿಕ‌ ಸದಸ್ಯರಾದ ಛಾಯದೇವಿ, ಮುಖಂಡರಾದ ಪ್ರದೀಪ್ , ಪ್ರಸನ್ನ,  ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್, ಯಶವಂತ್ ,ಅನಿಲ್ ಜೈನ್, ರಘು ,ಹರೀಶ್ ಅನಿಲ್  ಜನಾರ್ದನ್ , ಹರ್ಷ, ಮಧು, ರಘು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: