ಮೈಸೂರು

ಸಿಎಂ ಫಂಡ್ ಗೆ ಒಂದು ಲಕ್ಷ ದೇಣಿಗೆ: ಮೆಲೇನಿಯಂ ಕೆಮಿ ಫಾರ್ಮಾ ಪ್ರೈ ಲಿ ಕಂಪನಿಯಿಂದ ಚೆಕ್ ಹಸ್ತಾಂತರ

ಮೈಸೂರು,ಮೇ.27:- ಪ್ರಪಂಚದಾದ್ಯಂತ ಕೋವಿಡ್-19 ಭಾರೀ ತಲ್ಲಣವನ್ನೇ ಸೃಷ್ಟಿಸಿದ್ದು,  ಹತೋಟಿಗೆ ತರಲು ಸಾಕಷ್ಟು ಕಸರತ್ತು ನಡೆಸಬೇಕಿದೆ. ರಾಜ್ಯದಲ್ಲೂ ಕೋವಿಡ್-19ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದಕ್ಕಾಗಿ ಆರ್ಥಿಕ ನೆರವು ಬೇಕಿದೆ.ಖಾಸಗಿ ಸಂಸ್ಥೆಗಳಿಂದ ಈಗಾಗಲೇ ನೆರವು ಬರುತ್ತಿದೆ.

ಮೈಸೂರಿನ ಮಿಲೇನಿಯಂ ಕೆಮಿ ಫಾರ್ಮಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಉಪಾಧ್ಯಕ್ಷರಾದ ಅಭಿಷೇಕ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ಪರಿಹಾರ ನೀಡಿದ್ದು, ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರಿಗೆ ಚೆಕ್ ಹಸ್ತಾಂತರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: