ಮೈಸೂರು

ಮಾ.26: ಸ್ನೇಹ ರಂಗಪ್ರವೇಶ

ನಂದನಾ ಪ್ರದರ್ಶಕ ಕಲೆಗಳ ಕೇಂದ್ರ ಟ್ರಸ್ಟ್ ವತಿಯಿಂದ ಸ್ನೇಹ ರವರ ರಂಗ ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡೈರೆಕ್ಟರ್ ವಾರಿಜ ತಿಳಿಸಿದರು.

ಮೈಸೂರಿನ ಪತ್ರಕರ್ತರ  ಭವನದಲ್ಲಿ  ಬುಧವಾರ ನಡೆದ ಸುದ್ದಿಗೋಷ್ಠಿಯ ಮಾತನಾಡಿದ ಅವರು ಮಾರ್ಚ್ 26 ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಸ್ನೇಹ ರಂಗ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಎಲ್ಲರಲ್ಲೂ ನಾಟ್ಯಕಲೆ ಒಲಿದು  ಬರುವುದಿಲ್ಲ . ನಮ್ಮ ನಾಡಿನ ಸಂಸ್ಕೃತಿಯನ್ನು ಮತ್ತಷ್ಟು ಪಸರಿಸುವುದೇ ನಮ್ಮ ಟ್ರಸ್ಟ್ ನ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮು, ಸ್ನೇಹ, ಅಮೃತ ಮತ್ತಿತರರು ಉಪಸ್ಥಿತರಿದ್ದರು.

(ಬಿ.ಎಂ-ಎಸ್.ಎಚ್)

 

Leave a Reply

comments

Related Articles

error: