ಕ್ರೀಡೆ

ಐಸಿಸಿ ಟಿ 20 ವಿಶ್ವಕಪ್ 2022 ರವರೆಗೆ ಮುಂದೂಡುವ ನಿರೀಕ್ಷೆ : ನಾಳೆ ನಿರ್ಧಾರ

ದೇಶ(ನವದೆಹಲಿ)ಮೇ.27 :- ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಅನ್ನು 2022 ರವರೆಗೆ ಮುಂದೂಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ಟಿ 20 ವಿಶ್ವಕಪ್ ಅನ್ನು ಮುಂದೂಡುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ (ಮೇ 28) ಎಲ್ಲಾ ಕ್ರಿಕೆಟ್ ಮಂಡಳಿಗಳೊಂದಿಗೆ ಟೆಲಿ-ಕಾನ್ಫರೆನ್ಸ್ ಮಾಡಲಿದೆ. ಈ ನಿರ್ಧಾರವನ್ನು ಔಪಚಾರಿಕವಾಗಿ ಅಂಗೀಕರಿಸಿದರೆ, ಕೋವಿಡ್ -19 ಸಾಂಕ್ರಾಮಿಕ ಕಾರಣ ಸದಸ್ಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿಯ ಬ್ಲೂ ಪ್ರಿಂಟ್ ಸಿದ್ಧಗೊಳ್ಳಲಿದೆ ಎನ್ನಲಾಗುತ್ತಿದೆ.

ವಿಶ್ವ ಟಿ 20 ಮುಂದೂಡುವ ಸಾಧ್ಯತೆ ಇದೆ, ಆದರೆ ಅಂತಿಮ ತೀರ್ಮಾನವನ್ನು ಗುರುವಾರ ಮಾತ್ರ ತೆಗೆದುಕೊಳ್ಳಲಾಗುವುದು ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಪರಿಸ್ಥಿತಿಗಳಲ್ಲಿ ಟಿ 20 ವಿಶ್ವಕಪ್ ನಡೆಯುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ. ಮೇ 15 ರಂದು ಐಸಿಸಿ ಈವೆಂಟ್ಸ್ ಕಮಿಟಿ ಕ್ರಿಸ್ ಟೆಟ್ಲಿಯವರ ನೇತೃತ್ವದಲ್ಲಿ ಹಲವಾರು ಆಯ್ಕೆಗಳನ್ನು ಸೂಚಿಸಿತ್ತು. ಈ ಆಯ್ಕೆಗಳಲ್ಲಿ ಒಂದು ಪಂದ್ಯಾವಳಿಯನ್ನು ಅಕ್ಟೋಬರ್‌ನಿಂದ 2022 ಕ್ಕೆ ಮುಂದೂಡುವುದಾಗಿದೆ.

ಭಾರತವು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದು, ಇದು ಕೂಡ ಸುರಕ್ಷಿತವಾಗಿರುತ್ತದೆ. ಮಂಡಳಿಯ ಸದಸ್ಯರು ಇದು ದೇಶಗಳಷ್ಟೇ ಅಲ್ಲ, ಪ್ರಸಾರಕರ ವಿಷಯವೂ ಆಗಿದೆ ಎಂದು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಐಸಿಸಿ ಮತ್ತು ಬಿಸಿಸಿಐ  ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಹಕ್ಕನ್ನು ಹೊಂದಿದೆ. ಐಪಿಎಲ್ ಪ್ರಸಾರ ಮಾಡುವ ಹಕ್ಕನ್ನು ಸ್ಟಾರ್ ಹೊಂದಿದೆ ಎಂದಿದ್ದಾರೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: