ಮೈಸೂರು

ಪ್ರವಾಸೋದ್ಯಮ ಕಾರ್ಪೋರೇಶನ್ ಲಿಮಿಟೆಡ್ ನಿಂದ ಏರ್ ಪ್ಯಾಕೇಜ್

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ ಲಿಮಿಟೆಡ್ ವತಿಯಿಂದ ಬೇಸಿಗೆ ಏರ್ ಪ್ಯಾಕೇಜ್ ಗಳನ್ನು ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಕಿಶೋರ್ ಸತ್ಯ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಥೆ ಭಾರತ ಸರ್ಕಾರದ ಉದ್ಯಮವಾಗಿದ್ದು, ಬೇಸಿಗೆ ಅವಧಿಯಲ್ಲಿ ಮಲೇಷ್ಯಾ ಮತ್ತು ಸಿಂಗಾಪೂರ್ ಗೆ ಏರ್ ಪ್ಯಾಕೇಜ್ ಆರಂಭಿಸಿದ್ದೇವೆ. ಬೆಂಗಳೂರಿನಿಂದ ವಿಶೇಷ ಅಂತಾರಾಷ್ಟ್ರೀಯ ಪ್ಯಾಕೇಜ್ ಪ್ರಾರಂಭಿಸಲಾಗಿದೆ. ರಿಟರ್ನ್ ಏರ್ ಟಿಕೆಟ್ಉಪಹಾರ, ಊಟ ಮತ್ತು ವಸತಿ ಸೌಲಭ್ಯ ಇನ್ನಿತರೇ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಪ್ರವಾಸದ ಅವಧಿ 7 ದಿನಗಳಾಗಿದ್ದು, ಪ್ಯಾಕೇಜ್ ವೆಚ್ಚ 78,250 ರೂಪಾಯಿಗಳು. ಮತ್ತೊಂದು ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತಿದ್ದು, ಅದರ ವೆಚ್ಚ 27,350 ರೂಗಳು ಮಾತ್ರವಿದೆ. ಹೆಚ್ಚಿನ ಮಾಹಿತಿಗಾಗಿ 0821- 2426001 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸುರೇಶ್, ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: