ಕ್ರೀಡೆ

90 ದಿನಗಳ ಕಾಲ ಹ್ಯಾಟ್ಟಿ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಅಮಾನತು

ದೇಶ(ನವದೆಹಲಿ)ಮೇ.27:-  ವಿಶ್ವ ಫುಟ್‌ಬಾಲ್‌ನ ಉನ್ನತ ಸಂಸ್ಥೆಯಾದ ಫಿಫಾ (ಫಿಫಾ) ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಯುವ ಮಹಿಳಾ ಆಟಗಾರರ ಮೇಲೆ ಲೈಂಗಿಕ ಶೋಷಣೆ ಆರೋಪದ ಬಗ್ಗೆ ತನಿಖೆ ಬಾಕಿ ಇರುವಂತೆ 90 ದಿನಗಳ ಕಾಲ ಹ್ಯಾಟ್ಟಿ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷರನ್ನು ಅಮಾನತುಗೊಳಿಸಿದೆ.

ಪೋರ್ಟ್ ಒ ಪ್ರಿನ್ಸ್‌ನ ಹೊರವಲಯದಲ್ಲಿರುವ ತರಬೇತಿ ಕೇಂದ್ರವೊಂದರಲ್ಲಿ ಕಳೆದ 5 ವರ್ಷಗಳಲ್ಲಿ ಹಲವಾರು ಯುವ ಮಹಿಳಾ ಫುಟ್‌ಬಾಲ್ ಆಟಗಾರರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವನ್ನು ಹ್ಯಾಟ್ಟಿ ಫುಟ್‌ಬಾಲ್ ಫೆಡರೇಶನ್‌ನ ಮುಖ್ಯಸ್ಥ 73 ವರ್ಷದ ಯ್ವೆಸ್ ಜೀನ್-ಬಾರ್ಟ್ ನಿರಾಕರಿಸಿದ್ದಾರೆ.

ಫಿಫಾ ನೀತಿ ಸಂಹಿತೆಯ 84 ಮತ್ತು 85 ನೇ ವಿಧಿಗಳ ಪ್ರಕಾರ, ಸ್ವತಂತ್ರ ನೈತಿಕ ಸಮಿತಿಯ ತನಿಖಾ ಇಲಾಖೆಯು ಹ್ಯಾಟ್ಟಿ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಯ್ವೆಸ್ ಜೀನ್ ಬಾರ್ಟ್ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿದೆ ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಿದೆ. ಅವರು 90 ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಈ ತಾತ್ಕಾಲಿಕ ನಿಷೇಧವು ತಕ್ಷಣದಿಂದ ಜಾರಿಗೆ ಬರಲಿದೆ ಎಂದಿದೆ.

ಆರೋಪದ ಬಗ್ಗೆ ಹ್ಯಾಟ್ಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ, ಜೀನ್ ಬಾರ್ಟ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿತ್ತು, ನಂತರ ನ್ಯಾಯಾಧೀಶರು ಫುಟ್ಬಾಲ್ ಫೆಡರೇಶನ್‌ನ ಹಲವಾರು ಉದ್ಯೋಗಿಗಳನ್ನು ಪ್ರಶ್ನಿಸಿದ್ದರು. ಏಪ್ರಿಲ್ ನಲ್ಲಿ ‘ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜೀನ್ ಬಾರ್ಟ್ ಹಲವಾರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದರು ಎನ್ನಲಾಗಿದ್ದು, ಕನಿಷ್ಠ ಇಬ್ಬರು ಹುಡುಗಿಯರಿಗೆ ಗರ್ಭಪಾತ ಮಾಡಿಸಲಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: