ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ಹಾಲಿ ಖಾಲಿ ಉಳಿದಿರುವ ಎಲ್ಲಾ ಹುದ್ದೆಗಳ ಭರ್ತಿಗೆ ಸಿಂಡಿಕೇಟ್ ಸಭೆ ತೀರ್ಮಾನ

ಮೈಸೂರು,ಮೇ.27:- ಮೈಸೂರು ವಿಶ್ವವಿದ್ಯಾನಿಲಯದ ಬೋಧಕ ವೃಂದದ ಬ್ಯಾಕ್ ಲಾಗ್ , ಹೈದ್ರಬಾದ್ ಕರ್ನಾಟಕ ಮತ್ತು ಹಾಲಿ ಖಾಲಿ ಉಳಿದಿರುವ ಎಲ್ಲಾ ಹುದ್ದೆಗಳ ಭರ್ತಿಗೆ ಸಿಂಡಿಕೇಟ್ ಸಭೆ ತೀರ್ಮಾನಿಸಿದೆ.

2019 ರ ಮೇ 30 ರಂದು ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಬೋಧಕ ವೃಂದದ ಬ್ಯಾಕ್ ಲಾಗ್ , ಹೈದ್ರಬಾದ್ ಕರ್ನಾಟಕ ಮತ್ತು ಹಾಲಿ ಖಾಲಿ ಹುದ್ದೆಗಳ ಭರ್ತಿಗೆ ಸಿಂಡಿಕೇಟ್ ಸಭೆ ತೀರ್ಮಾನಿಸಿತ್ತು. ಇಂದು ನಡೆದ ಸಭೆಯಲ್ಲಿ 2020 ರ ಮೇ 31 ರವರೆಗೆ ಖಾಲಿ ಯಾಗುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹುದ್ದೆ ನೇಮಕ ಮಾಡಿಕೊಳ್ಳಲು ವಿವಿಯ ಸ್ಟ್ಯಾಚೂಟ್ ಗೆ ಅಗತ್ಯ ತಿದ್ದುಪಡಿ ಮಾಡುವುದು, ಈ ಹಿಂದೆ ತೀರ್ಮಾನಿಸಿದಂತೆ ಒಂದು ಹುದ್ದೆಗೆ ಮೂರು ಮಂದಿ ಬದಲು, 1 : 10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲು ಸಹ ತೀರ್ಮಾನಿಸಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಯಿತು.

ನೇಮಕಕ್ಕೆ ಅನುಮೋದನೆ

ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾಗಿ ಪ್ರೊ.ಎಂ.ಜಿ.ಮಂಜುನಾಥ್ ಹಾಗೂ ಮೈಸೂರು ವಿವಿ ಪ್ರಸರಾಂಗ ನಿರ್ದೇಶಕರಾಗಿ ಪ್ರೊ.ವಿಜಯಕುಮಾರಿ ಎಸ್.ಕರಿಕಲ್ ಅವರನ್ನು ನೇಮಕ ಮಾಡಲು ಸಿಂಡಿಕೇಟ್ ಸಭೆ ಅನುಮೋದನೆ ನೀಡಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: