ಮೈಸೂರು

ಅಧಿಕಾರಿಗಳು ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಡೆಸುತ್ತಿರುವುದಕ್ಕೆ ಹರಿಹರ ಆನಂದಸ್ವಾಮಿ ಖಂಡನೆ

ಹುಣಸೂರು ತಾಲಕಿನ ಬಿಳಿಕೆರೆ ಹೋಬಳಿ, ಹಳೇಪುರ ಗ್ರಾಮದ ಪರಿಶಿಷ್ಟ ಜಾತಿಯವರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯವನ್ನು ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ಖಂಡಿಸಿದ್ದಾರೆ.

ಮೈಸೂರಿನ  ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಳೇಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಪ್ಪತ್ತೈದು ಕುಟುಂಬಗಳಿದ್ದು, ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರು ವಾಸವಾಗಿದ್ದಾರೆ. ಈ 25-30 ವರ್ಷಗಳ ಹಿಂದೆ ಸರ್ಕಾರದಿಂದ ನೀಡಿದ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ನಿರ್ಮಿಸಲಾಗಿದೆ.ಸಮುದಾಯದ ಮುಂಭಾಗ 20-30 ಅಳತೆಯ ಜಾಗವಿದ್ದು ಆ ಜಾಗವನ್ನು ಜನರ ಅನುಕೂಲಕ್ಕಾಗಿ ನಿಗದಿಪಡಿಸಲಾಗಿತ್ತು, ಆದರೆ ಮಾರ್ಚ್ 15 ರಂದು ಅಧಿಕಾರಿಗಳು ಪೂರ್ವ ನಿಯೋಜಿತ ಯೋಜನೆಯಂತೆ ಏಕಾಏಕಿ ಬಂದು ಪರಿಶಿಷ್ಟ ಜಾತಿಯವರಿಗೆ ನಿಗದಿಯಾದ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧನ ನಾಮಫಲಕವನ್ನು ಅಪಮಾನಗೊಳಿಸಿ ಕೀಳಿಸಿದ್ದಾರೆ.ಇದನ್ನು ಪ್ರಶ್ನಿಸಿದವರಿಗೆ ಪರಿಶಿಷ್ಟ ಜಾತಿಯವರು ಹೇಗಿರಬೇಕೋ ಹಾಗಿರಿ ಇಲ್ಲದಿದ್ದರೆ ಜೈಲಿಗೆ ಕಳುಗಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದಲಿತರಿಗೆ ರಕ್ಷಣೆ ನೀಡಬೇಕು. ಇಲ್ಲವಾದ್ದಲ್ಲಿ ಮಾರ್ಚ್ 24 ರಂದು ದಲಿತರು, ಹಿಂದುಳಿದವರು ಒಗ್ಗೂಡಿ ಹುಣಸೂರಿನಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯ ವರಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಅಧ್ಯಕ್ಷ ಕೆ.ವಿ.ದೇವೇಂದ್ರ, ಉಪಾಧ್ಯಕ್ಷ ಸೋಮಯ್ಯ ಮಲೆಯೂರು, ಸದಸ್ಯ ಜವರಪ್ಪ ಮತ್ತಿತರರು ಹಾಜರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: