ಮೈಸೂರು

ನಿನ್ನೆಯೂ ಕೂಡ ಮೈಸೂರಿನಲ್ಲಿ ಗುಡುಗು-ಮಿಂಚು ಗಾಳಿ ಸಮೇತ ಮಳೆ ಅಬ್ಬರ

ಮೈಸೂರು,ಮೇ.28:-ಕಳೆದ ಸೋಮವಾರದಿಂದ ಮಳೆರಾಯ ಮೈಸೂರಿಗೆ ಪ್ರತಿನಿತ್ಯ ಸಂಜೆ ತಪ್ಪದೇ ಹಾಜರಾಗುತ್ತಿದ್ದಾನೆ. ನಿನ್ನೆಯೂ ಕೂಡ ಮೈಸೂರಿನಲ್ಲಿ ಗುಡುಗು-ಮಿಂಚು ಗಾಳಿ ಸಮೇತ ಮಳೆ ಅಬ್ಬರಿಸಿದ್ದು ಹಲವು ಕಡೆ ಮರಗಳು ಧರೆಗುರುಳಿವೆ.

ರೋಹಿಣಿ ಮಳೆಯು ಬಿರುಗಾಳಿಯೊಂದಿಗೆ ಸುರಿದ ಪರಿಣಾಮ ನಗರದ 20ಕ್ಕೂ ಹೆಚ್ಚು ಕಡೆ ಮರಗಳು ಧರೆಗುರುಳಿವೆ. ವಿದ್ಯಾರಣ್ಯಪುರಂ ಹಾಗೂ ಅಶೋಕಪುರಂ ಪೊಲೀಸ್ ಠಾಣೆ ಸಮೀಪ, ಸರಸ್ವತಿಪುರಂನ ಕುವೆಂಪು ಶಾಲೆಯ ಬಳಿ, ರಾಜೀವ್ ನಗರದ ಒಂದನೇ ಹಂತ, ಬಸವೇಶ್ವರ ನಗರ, ಶಾರದಾದೇವಿ ನಗರ, ನಿವೇದಿತ ನಗರ,ರಾಮಾನುಜ ರಸ್ತೆ, ಸುಭಾಷ್ ನಗರ, ರಾಮಕೃಷ್ಣ ನಗರ, ಅಭಿಷೇಕ್ ವೃತ್ತ,ಮೇಟಗಳ್ಳಿ, ಕೆ.ಆರ್.ಮೊಹಲ್ಲಾಗಳಲ್ಲಿ ಮರಗಳು, ಕೊಂಬೆಗಳು ಧರಾಶಾಹಿಯಾಗಿವೆ. ನಿವೇದಿತಾ ನಗರದ 2ನೇ ಮೇನ್ ನಲ್ಲಿ ನಿಲ್ಲಿಸಲಾದ ಕಾರೊಂದರ ಮೇಲೆ ಮರವೊಂದು ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಪಾಲಿಕೆಯ ರಕ್ಷಣಾ ತಂಡ ಅಭಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ರಾಮಾನುಜ ರಸ್ತೆ, ಜ್ಯೋತಿನಗರ, ತ್ಯಾಗರಾಜ ರಸ್ತೆ, ವಿದ್ಯಾರಣ್ಯಪುರಂ ಸೇರಿದಂತೆ ಹಲವೆಡೆ ಮನೆಗಳಿವೆ ನೀರು ನುಗ್ಗಿವೆ. ಜಿಲ್ಲೆಯ ಕೆ.ಆರ್.ನಗರ, ಹೆಚ್.ಡಿ.ಕೋಟೆ ಪಿರಿಯಾಪಟ್ಟಣ, ಸರಗೂರು, ಬೆಟ್ಟದಪುರ ಭಾಗಗಳಲ್ಲೂ ಮಳೆ ಜೋರಾಗಿಯೇ ಸುರಿದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: