ದೇಶಪ್ರಮುಖ ಸುದ್ದಿ

ಪುಲ್ವಾಮಾ ಮಾದರಿ ದಾಳಿ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ: 20ಕೆಜಿ ಐಇಡಿ ಸ್ಫೋಟಕವಿದ್ದ ಕಾರು ನಾಶ

ಶ್ರೀನಗರ,ಮೇ 28-ಪುಲ್ವಾಮಾ ಮಾದರಿಯ ಭೀಕರ ಭಯೋತ್ಪಾದಕ ದಾಳಿಯ ಯತ್ನವನ್ನು ವಿಫಲಗೊಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದಾರೆ.

ಪುಲ್ವಾಮದಲ್ಲಿ ಬರೋಬ್ಬರಿ 20 ಕೆಜಿ ಸ್ಫೋಟಕಗಳನ್ನು ಹೊತ್ತಿದ್ದ ಕಾರೊಂದನ್ನು ತಡೆದ ಭದ್ರತಾ ಪಡೆಗಳು ದಾಳಿಯ ಯತ್ನವನ್ನು ವಿಫಲಗೊಳಿಸಿವೆ. ಸದ್ಯ ಐಇಡಿ ಸ್ಪೋಟಕಗಳಿದ್ದ ಕಾರನ್ನು ಬಾಂಬ್ ನಿಷ್ಕ್ರೀಯ ದಳ ನಾಶ ಪಡೆಸಿದೆ.

ನಕಲಿ ನಂಬರ್ ಪ್ಲೇಟ್ ಇದ್ದ ಕಾರೊಂದನ್ನು ತಪಾಸಣೆಗೆಂದು ತಡೆದ ಭದ್ರತಾ ಸಿಬ್ಬಂದಿ, ಕಾರಿನಲ್ಲಿ 20 ಕೆಜಿ ಐಇಡಿ ಸ್ಫೋಟಕ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಭದ್ರತಾ ಸಿಬ್ಬಂದಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡುತ್ತಿದ್ದಂತೇ ಭದ್ರತಾ ತಡೆಗೋಡೆಯನ್ನು ಒಡೆದು ಮುನ್ನುಗ್ಗಲೆತ್ನಿಸಿದ ಚಾಲಕನ ಮೇಲೆ ಸೈನಿಕರು ಗುಂಡು ಹಾರಿಸಿದ್ದಾರೆ. ಆದರೆ ಕಾರನ್ನು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.

ಈ ಕುರಿತು ಮಾಹಿತಿ ನೀಡಿರುವ ಐಜಿಪಿ ವಿಜಯ್ ಕುಮಾರ್, ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಾರೀ ಅನಾಹುತವೊಂದನ್ನು ತಪ್ಪಿಸಲಾಗಿದೆ. ಸಂಭಾವ್ಯ ದಾಳಿಯ ಕುರಿತಂತೆ ನಾವು ಗುಪ್ತಚರ ಮಾಹಿತಿಯನ್ನು ಪಡೆದಿದ್ದೆವು. ಐಇಡಿ ತುಂಬಿದ್ದ ವಾಹನದ ಬರುವಿಕೆಗಾಗಿ ನಿನ್ನೆಯಿಂದ ಕಾಯುತ್ತಿದ್ದೆವು. ಸದ್ಯ ಐಇಡಿ ಸ್ಫೋಟಕಗಳಿದ್ದ ಕಾರನ್ನು ಬಾಂಬ್ ನಿಷ್ಕ್ರೀಯ ದಳ ನಾಶ ಮಾಡಿದ್ದು, ಈ ಕುರಿತ ತನಿಖೆಗೆ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2019 ರ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ವಾಹನದ ಮೇಲೆ ನಡೆದ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಸಿಎಆರ್‌ಪಿಎಫ್ 41 ಯೋಧರು ಮೃತಪಟ್ಟಿದ್ದರು. (ಎಂ.ಎನ್)

Leave a Reply

comments

Related Articles

error: