ಕ್ರೀಡೆಪ್ರಮುಖ ಸುದ್ದಿ

ಟ್ರಂಪ್ – ಕೊಹ್ಲಿ ಹೋಲಿಕೆ : ಮಾಧ್ಯಮಗಳಿಗೆ ಅಮಿತಾಬ್ ಬಚ್ಚನ್ ತಿರುಗೇಟು

ನವದೆಹಲಿ: ವಿರಾಟ್ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳು ಒಂದೇ ಸಮನೆ ಟೀಕೆ ಮಾಡುತ್ತಿರುವುದರ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಿಗ್ ಬಿ ಅಮಿತಾಬ್ ತಿರುಗೇಟು ನೀಡಿದ್ದಾರೆ.

‘ದಿ ಡೇಲಿ ಟೆಲಿಗ್ರಾಫ್’ ಪತ್ರಿಕೆ ವಿರಾಟ್ ಕೊಹ್ಲಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಹೋಲಿಸಿದೆ. ವಿರಾಟ್ ಕೊಹ್ಲಿ ವಿಶ್ವ ಕ್ರೀಡಾ ರಂಗದ ಡೊನಾಲ್ಡ್ ಟ್ರಂಪ್ ಎಂದು ಪತ್ರಿಕೆ ತನ್ನ ವರದಿಯಲ್ಲಿ ತೆಗಳಿದೆ. ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಿಗ್ ಬಿ ಅಮಿತಾಬ್ ತಿರುಗೇಟು ನೀಡಿದ್ದು, ಕೊಹ್ಲಿ ವಿಜಯಶಾಲಿ ಹಾಗೂ ಅಧ್ಯಕ್ಷ ಎಂಬ ಸತ್ಯವನ್ನು ಮಾಧ್ಯಮಗಳು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.

ರಾಂಚಿ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದ ಆಟಗಾರರು ಟೀಮ್ ಇಂಡಿಯಾ ಫಿಸಿಯೋ ಪ್ಯಾಟ್ರಿಕ್ ಫರ್ಹಾಟ್​ರನ್ನು ಲೇವಡಿ ಮಾಡಿದ್ದರು ಎಂದು ಕೊಹ್ಲಿ ಆರೋಪ ಮಾಡಿದ ಬೆನ್ನಲ್ಲೇ ಆಸೀಸ್ ಪತ್ರಿಕೆಗಳು ಮತ್ತೆ ಕೊಹ್ಲಿ ವಿರುದ್ಧ ಮುಗಿಬಿದ್ದಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ರೀತಿಯಲ್ಲೇ ತಮ್ಮ ಮುಖಭಂಗವನ್ನು ತಪ್ಪಿಸಿಕೊಳ್ಳಲು ವಿರಾಟ್ ಕೊಹ್ಲಿ ಮಾಧ್ಯಮಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಬರೆಯಲಾಗಿತ್ತು.

(ಎನ್‍ಬಿಎನ್‍)

Leave a Reply

comments

Related Articles

error: