
ಮೈಸೂರು
ಚಿತ್ರಮಂದಿರಗಳು ಮತ್ತು ಮಾಲ್ ಗಳನ್ನು ತೆರೆಯುವಂತೆ ಒತ್ತಾಯಿಸಿ ಪತ್ರ ಚಳವಳಿ
ಮೈಸೂರು,ಮೇ.28:- ಚಿತ್ರಮಂದಿರಗಳು ಮತ್ತು ಮಾಲ್ ಗಳನ್ನು ತೆರೆಯುವಂತೆ ಒತ್ತಾಯಿಸಿ ಪಾತಿ ಪೌಂಢೇಶನ್ ವತಿಯಿಂದ ಇಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಲಾಯಿತು.
ಜಗನ್ಮೋಹನ್ ಅರಮನೆ ಎದುರಿಂದು ಅಂಚೆ ಡಬ್ಬಕ್ಕೆ ಪತ್ರ ಹಾಕುವ ಮೂಲಕ ಚಾಲನೆ ನೀಡಿದ ಪಾತಿ ಫೌಂಡೇಶನ್ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮಾತನಾಡಿ ಕೊರೋನಾ ವೈರಸ್ ಎಲ್ಲೆಡೆಯೂ ಆತಂಖ ಸೃಷ್ಟಿಸಿರುವುದು ನಿಜ. ಅದಕ್ಕಾಗಿ ತಿಂಗಳಾನುಗಟ್ಟಲೇ ಲಾಕ್ ಡೌನ್ ಕೂಡ ಘೋಷಿಸಲಾಗಿತ್ತು. ಚಿತ್ರಮಂದಿರಗಳು, ಮಾಲ್ ಗಳು ಕೂಡ ತೆರೆದಿರಲಿಲ್ಲ. ಆದರೆ ಈಗ ಲಾಕ್ ಡೌನ್ ಸಡಿಲಿಕೆಯಾಗುತ್ತಿದೆ. ಚಿತ್ರಮಂದಿರಗಳು ಮತ್ತು ಮಾಲ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಿ, ಸರ್ಕಾರದ ಮಾರ್ಗಸೂಚಿಯಡಿಯಲ್ಲಿಯೇ ಅವರು ಕೂಡ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಿ. ಅವುಗಳನ್ನೇ ನಂಬಿಕೊಂಡ ಹಲವಾರು ಜನರು ಇಂದು ಬದುಕು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಅವರ್ತ್ಲೂ ಗಮನ ಹರಿಸಿ ಎಂದರು.
ಈ ಸಂದರ್ಭ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)