ಮನರಂಜನೆ

ರಾಧಿಕಾ ಪಂಡಿತ್ `ಫೇವರಿಟ್ ಬಾಯ್ಸ್’ ನ ಫೋಟೋ ವೈರಲ್

ಬೆಂಗಳೂರು,ಮೇ 28-ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುದ್ದಾದ ಫೋಟೋವೊಂದು ಸಖತ್ ವೈರಲ್ ಆಗಿದೆ.

ಫೋಟೋವನ್ನು ಪೋಸ್ಟ್ ಮಾಡಿ ನನ್ನ ಫೇವರಿಟ್ ಬಾಯ್ಸ್ಎಂದು ಬರೆದುಕೊಂಡಿದ್ದಾರೆ. ಆ ಫೇವರಿಟ್ ಬಾಯ್ಸ್ ಬೇರ್ಯಾರು ಅಲ್ಲ. ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗೂ ಜೂನಿಯರ್ ಯಶ್.

ಹೌದು, ಅಪ್ಪ-ಮಗನ ಮುದ್ದಾದ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ. ಯಶ್ ಮುದ್ದು ಮಗನನ್ನು ಎತ್ತಿಕೊಂಡಿದ್ದಾರೆ. ಮಗು ಅಪ್ಪನ ತೋಳಲ್ಲಿ ನಗುಬೀರುತ್ತ ಫೋಟೋಗೆ ಪೋಸ್ ನೀಡಿದೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಗಳು ಬರುತ್ತಿವೆ.

ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಗನಿಗೆ ಈಗ 6 ತಿಂಗಳು ತುಂಬಿದೆ. ಮಗಳಿಗೆ ಐರಾ ಅಂತ ನಾಮಕರಣ ಮಾಡಿರುವ ಯಶ್ ದಂಪತಿ ಮಗನಿಗೆ ಏನು ಹೆಸರಿಡಲಿದ್ದಾರೆ ಎನ್ನುವುದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಯಶ್ `ಕೆಜಿಎಫ್-2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೊನೆಯ 25 ದಿನಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭಿಸಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ. ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ ಬರುತ್ತಿದೆ. (ಎಂ.ಎನ್)

 

Leave a Reply

comments

Related Articles

error: