ಮೈಸೂರು

ಹೊಳೆ ನರಸೀಪುರ ಪಿಎಸ್ ಐಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ : ಮೈಸೂರು ಲಕ್ಷ್ಮಿಪುರಂ ಪೊಲೀಸ್ ಠಾಣೆಯ ನಾಲ್ವರು ಕ್ವಾರೆಂಟೈನ್ ನಲ್ಲಿ

ಮೈಸೂರು,ಮೇ.28:- ಹೊಳೆ ನರಸೀಪುರ ಪಿಎಸ್ ಐ ಓರ್ವರನ್ನು ಭೇಟಿ ಮಾಡಿದ ಪರಿಣಾಮ ಲಕ್ಷ್ಮಿಪುರಂ ಪೊಲೀಸ್ ಠಾಣೆಯ  ಎಎಸ್ ಐ, ಮಹಿಳಾ ಕಾನ್ಸಟೇಬಲ್, ಪುರುಷ ಕಾನ್ಸಟೇಬಲ್ ಮತ್ತು ಚಾಲಕರೋರ್ವರನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ ಎನ್ನಲಾಗುತ್ತಿದೆ.

ಹೊಳೆ ನರಸೀಪುರ ಪಿಎಸ್ ಐ ಅವರಿಗೆ ಕೊರೋನಾ ವೈರಸ್ ಸೋಂಕಿರುವುದು ದೃಢಪಟ್ಟಿದ್ದು, ಮೈಸೂರು ಲಕ್ಷ್ಮಿಪುರಂ ಠಾಣೆಯ ಎಎಸ್ ಐ, ಮಹಿಳಾ ಕಾನ್ಸಟೇಬಲ್ ಮತ್ತು ಪುರುಷ ಕಾನ್ಸಟೇಬಲ್, ಚಾಲಕ ಇವರುಗಳು ಹೊಳೆ ನರಸೀಪುರ ಪಿಎಸ್ ಐ ಅವರನ್ನು ಭೇಟಿ ಮಾಡಿದ್ದು, ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಾಲ್ವರನ್ನು ಇದೀಗ ಕ್ವಾರೆಂಟೈನ್ ಗೆ ಒಳಪಡಿಸಿದ್ದು, ಈ ನಾಲ್ವರಲ್ಲಿ ಅಕಸ್ಮಾತ್ ಯಾರಿಗಾದರೂ ಪಾಸಿಟಿವ್ ದೃಢಪಟ್ಟಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಈಗಾಗಲೇ ಹೊಳೆ ನರಸೀಪುರ ಪಿಎಸ್ ಐ  ಅವರ ನಿರ್ಲಕ್ಷ್ಯತನದಿಂದಾಗಿ ಹುಣಸೂರು ತಾಲೂಕಿನ 38ಮಂದಿ ಸಂಪರ್ಕಕ್ಕೆ ಬಂದಿದ್ದು ಅವರನ್ನು ಹೋಂಕ್ವಾರೆಂಟೈನ್ ಇರಿಸಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: