ಮೈಸೂರು

ಮೈಸೂರು ದಸರೆಗೆ ರಾಜವಂಶಸ್ಥರಿಗೆ ಅಧಿಕೃತ ಆಹ್ವಾನ

ರಾಜವಂಶಸ್ಥರನ್ನು ಮಂಗಳವಾರ ಭೇಟಿ ಮಾಡಿದ ಜಿಲ್ಲಾಡಳಿತ ದಸರಾಗೆ ಅಧಿಕೃತ ಆಹ್ವಾನವನ್ನು ನೀಡಿತು.

ಅಂಬಾವಿಲಾಸ ಅರಮನೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರಿಗೆ ಫಲ ತಾಂಬೂಲ ನೀಡಿ ಸಾಂಪ್ರದಾಯಿಕವಾಗಿ ಆಹ್ವಾನಿಸಲಾಯಿತು. ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್, ಮೇಯರ್ ಬಿ.ಎಲ್. ಬೈರಪ್ಪ, ಉಪ ಮೇಯರ್ ವನಿತಾ ಪ್ರಸನ್ನ, ಜಿಲ್ಲಾಧಿಕಾರಿ ಡಿ. ರಂದೀಪ್ ಸೇರಿದಂತೆ ಅಧಿಕಾರಿಗಳು ತಂಡದಲ್ಲಿದ್ದರು.

‘2016ರ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಆಹ್ವಾನ ನೀಡಿದೆ. ದಸರಾಗೆ ರಾಜ ಮನೆತನದಿಂದ ಸಹಕಾರ ನೀಡಲಾಗುವುದು’ ಎಂದು ರಾಜಮಾತೆ ಪ್ರಮೋದಾದೇವಿ ಹೇಳಿದರು.

ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, “ರಾಜವಂಶಸ್ಥರನ್ನು ಭೇಟಿ ಮಾಡಿ ಸಾಂಪ್ರದಾಯಿಕವಾಗಿ ದಸರೆಗೆ ಆಹ್ವಾನಿಸಲಾಗಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್‍ ಸಂತೋಷದಿಂದಲೇ ಆಹ್ವಾನವನ್ನು ಸ್ವೀಕರಿಸಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಗೌರವ ಧನವಾಗಿ 36 ಲಕ್ಷ ರು.ಗಳನ್ನು ನೀಡಿ ದಸರೆಗೆ ಆಹ್ವಾನ ನೀಡಲಾಗಿದೆ” ಎಂದರು.

Leave a Reply

comments

Related Articles

error: