ಪ್ರಮುಖ ಸುದ್ದಿ

ದೇಶದಲ್ಲಿ ಕೊರೋನಾ ವೈರಸ್  7466 ಹೊಸ ಪ್ರಕರಣಗಳು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 175 ಜನರ ಸಾವು  

ದೇಶ(ನವದೆಹಲಿ)ಮೇ.29:-   ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ, ಸೋಂಕಿತ ರೋಗಿಗಳ 7466 ಹೊಸ ಪ್ರಕರಣಗಳು ವರದಿಯಾಗಿವೆ.

ಇದು ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕುಗಳಾಗಿದೆ. ಅದೇ ವೇಳೆ ನಿನ್ನೆ 175 ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಇದುವರೆಗೆ ಒಂದು ಲಕ್ಷ 65 ಸಾವಿರ 799 ಪ್ರಕರಣಗಳು ವರದಿಯಾಗಿವೆ. ಅದೇ ವೇಳೆ 4706 ಜನರು ಸಾವನ್ನಪ್ಪಿದ್ದಾರೆ. 71 ಸಾವಿರ 106 ಜನರು ಗುಣಮುಖರಾಗಿದ್ದು ಚೇತರಿಸಿಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: