ಪ್ರಮುಖ ಸುದ್ದಿಮೈಸೂರು

ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ ಸಚಿವ ರಮೇಶ್ ಜಾರಕಿಹೊಳಿ

ಮೈಸೂರು,ಮೇ.29:- ಮೈಸೂರು ಅರಮನೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದು ಭೇಟಿ ನೀಡಿದರು.

ಮೈಸೂರು ಅರಮನೆಗೆ ತೆರಳಿದ ಸಚಿವರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅರಮನೆಗೆ ಬಂದು ಬಹಳ‌ ವರ್ಷವಾಗಿತ್ತು. ರಾಜವಂಶಸ್ಥ ರನ್ನು ಭೇಟಿ ಮಾಡಿ ಖುಷಿ ತಂದಿದೆ. ರಾಜ್ಯಕ್ಕೆ ಇವರ ಕೊಡುಗೆ ಅಪಾರ. ಕೆ ಆರ್ ಎಸ್ ಜಲಾಶಯ ದಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ನೀಲಿ‌ ಶಿಕ್ಷೆ ತಯಾರಾಗಿದೆ. ಈ ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: