ಮೈಸೂರು

ಶಹಬಾಜ್ ಮೇಲೆ ನಡೆದ ಹಲ್ಲೆ ಪ್ರಕರಣ : ಮೂವರ ಬಂಧನ

ಮೈಸೂರು,ಮೇ.29:- ಮಹಾನಗರ ಪಾಲಿಕೆ ಸದಸ್ಯ ಪಂಡು ಅಳಿಯನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಮಂದಿ ಪತ್ತೆ ಹಚ್ಚಲು ಕಾರ್ಯಾಚರಣೆ ಮುಂದುವರಿದಿದ್ದು, ಉದಯಗಿರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫಂಡು ಅಳಿಯ ಶಹಬಾಜ್ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೇ.10ರಂದು ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಉದಯಗಿರಿ ಅಲಬದರ್ ವೃತ್ತದ ಬಳಿ   ಘಟನೆ ನಡೆದಿತ್ತು. ದಾಳಿಯಲ್ಲಿ ಎಡ ಭಾಗದ ಕೈ  ತುಂಡರಿಸಿತ್ತು. ಇದೀಗ ಆ ಕೈಯನ್ನೇ ಸಂಪೂರ್ಣವಾಗಿ ವೈದ್ಯರು ತೆಗೆದುಹಾಕಿದ್ದಾರೆ. ಜೀವಕ್ಕೆ ತೊಂದರೆಯಾಗಬಹುದು ಎಂಬ ಉದ್ದೇಶದಿಂದ ಕೈಯನ್ನು ವೈದ್ಯರು ತೆಗೆದಿದ್ದಾರೆ. ಸಾವು ಬದುಕಿನ ನಡುವೆ ಶಹಬಾಜ್ ಹೋರಾಡುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: