
ಪ್ರಮುಖ ಸುದ್ದಿಮೈಸೂರು
ಎಸ್ಎಸ್ಎಲ್ಸಿ ಪರೀಕ್ಷೆ 25ರಿಂದ ಜುಲೈ 4ರವರೆಗೆ ವೇಳಾಪಟ್ಟಿ ನಿಗದಿ : ಒಂದು ಹಾಲ್ ನಲ್ಲಿ 18ಮಕ್ಕಳಿಗೆ ಅವಕಾಶ ; ಸಚಿವ ಸುರೇಶ್ ಕುಮಾರ್ ಮಾಹಿತಿ
ಮೈಸೂರು,ಮೇ.29:- ಎಸ್ಎಸ್ಎಲ್ಸಿ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮೈಸೂರಿನಲ್ಲಿಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 27ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಚರ್ಚೆ, ಸಮಾಲೋಚನೆ, ಫೋನ್ಇನ್ ಆಗಿದೆ. ಜೂನ್ 25ರಿಂದ ಜುಲೈ 4ರವರೆಗೆ ವೇಳಾಪಟ್ಟಿ ನಿಗದಿಯಾಗಿದೆ. 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಹೊಸ ವಾತಾವರಣದಲ್ಲಿ ಪರೀಕ್ಷೆ ನಡೆಸಬೇಕಿದೆ. ಮಾಸ್ಕ್ಗಳನ್ನು ಕೊಡಲು ಸ್ಕೌಟ್ಸ್ ಮತ್ತು ಗೈಡ್ಸ್ ಮುಂದೆ ಬಂದಿದೆ. ಮೈಸೂರು ಜಿಲ್ಲೆಗೆ 42 ಸಾವಿರ ಮಾಸ್ಕ್ ಕೊಟ್ಟಿದ್ದಾರೆ. ಪ್ರತಿ ಮಕ್ಕಳಿಗೆ 2 ಮಾಸ್ಕ್ ಸಿಗುತ್ತೆ. ಸ್ಯಾನಟೈಸರ್ ನೀಡುತ್ತೇವೆ.4000 ಸೆಂಟರ್ಗಳಲ್ಲೂ ಸ್ಯಾನಟೈಸರ್ ಇರುತ್ತೆ. ಥರ್ಮಲ್ ಸ್ಕ್ಯಾನರ್ ಮಾಡಲು ಆರೋಗ್ಯ ಇಲಾಖೆ ತಂಡಗಳನ್ನು ನಿಯೋಜಿಸಲಾಗುವುದು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ನಿಯೋಜಿಸುತ್ತೇವೆ ಎಂದರು.
ಪ್ರತಿ ಹಾಲ್ನಲ್ಲಿ 24 ಜನ ಕೂರಿಸುತ್ತಿದ್ದೆವು. ಈ ವರ್ಷ 18 ವಿದ್ಯಾರ್ಥಿಗಳನ್ನು ಕೂರಿಸುತ್ತೇವೆ. ಬೆಂಚ್ಗಳ ನಡುವೆ ಅಂತರ ಇರುತ್ತೆ. ಆರೋಗ್ಯದಲ್ಲಿ ಏರುಪೇರುಗಳಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ. ಪರೀಕ್ಷಾರ್ಥಿಯು ಪರೀಕ್ಷೆಯಲ್ಲಿ ಮಿಸ್ ಆದರೆ ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಕ್ಯಾಂಡಿಡೇಟ್ ಅಂತ ಪರಿಗಣಿಸುತ್ತೇವೆ. ವಲಸೆ ಕಾರ್ಮಿಕರ ಮಕ್ಕಳಿಗೆ ಸಮೀಪದ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದರು. (ಕೆ.ಎಸ್,ಎಸ್.ಎಚ್)