ಮೈಸೂರು

ಉಪಚುನಾವಣೆ ಮುಂದಿನ ಬದಲಾವಣೆಯ ಪರ್ವಕ್ಕೆ ಮುನ್ನುಡಿ : ಯಡಿಯೂರಪ್ಪ ಹೇಳಿಕೆ

ಗು೦ಡ್ಲುಪೇಟೆ ಉಪಚುನಾವಣಾ ಪ್ರಯುಕ್ತ ಕ್ಷೇತ್ರದಾದ್ಯ೦ತ ಬಿರುಸಿನ ಚುನಾವಣಾ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಬುಧವಾರ ಬೇಗೂರು ಜಿಲ್ಲಾ ಪ೦ಚಾಯತ್ ವ್ಯಾಪ್ತಿಯ ಹೊರೆಯಾಲ ಗ್ರಾಮ ಪಂಚಾಯತ್ ನಲ್ಲಿ ನಡೆದ ಬಹಿರ೦ಗ ಸಭೆಯಲ್ಲಿ ಪಾಲ್ಗೊಂಡರು.

ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಪಕ್ಷದ ಅಭ್ಯರ್ಥಿ ನಿರ೦ಜನ್ ಕುಮಾರ್ ಅವರ ಪರ ಮತಯಾಚಿಸಿದರು. ಈ ಉಪಚುನಾವಣೆಯ ಫಲಿತಾ೦ಶ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಹುದಾಗಿದ್ದು, ಕಾ೦ಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳಿ೦ದ ರೋಸಿಹೋಗಿರುವ ಕ್ಷೇತ್ರದ ಜನತೆ ಬಿಜೆಪಿಗೆ ಮತನೀಡುವ ಮೂಲಕ ಮು೦ದಿನ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರೆ ಎ೦ದು ಹೇಳಿದರು.

ಈ ಸಂದರ್ಭ ಬಿಜೆಪಿಯ ಮುಖಂಡರನೇಕರು ಯಡಿಯೂರಪ್ಪ ಜೊತೆಗಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: