ನಮ್ಮೂರುಮೈಸೂರು

ವಸ್ತು ಪ್ರದರ್ಶನ ಮೈದಾನ ವೀಕ್ಷಿಸಿದ ಸಚಿವ ಮಹದೇವ ಪ್ರಸಾದ್

ಮಂಗಳವಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ವಸ್ತುಪ್ರದರ್ಶನ ಮೈದಾನಕ್ಕೆ ತೆರಳಿ ಅಲ್ಲಿ ನಡೆಯುತ್ತಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಮೈಸೂರು ದಸರಾ ಉತ್ಸವದಲ್ಲಿ ವಸ್ತು ಪ್ರದರ್ಶನವು ಆಕರ್ಷಣೆಯ ಕೇಂದ್ರವಾಗಿದ್ದು ಅಕ್ಟೋಬರ್ 1ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಈ ಸಂದರ್ಭ ಉಪಸ್ಥಿತರಿದ್ದ ರಾಜ್ಯ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಮಾದ್ಯಮದವರೊಂದಿಗೆ ಮಾತನಾಡಿ ಈ ಬಾರಿ ವಸ್ತು ಪ್ರದರ್ಶನವನ್ನು ಭರ್ಜರಿಯಾಗಿ ನಡೆಸಲಾಗುವುದು. 143 ಮಳಿಗೆಗಳು ತಲೆ ಎತ್ತಲಿದ್ದು, ಬೆಂಗಳೂರಿನ ಫನ್ ವರ್ಲ್ಡ್ & ರೆಸಾರ್ಟ್ಸ್ ಅಡಿ ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ಫುಡ್ ಕೋರ್ಟ್ ತೆರೆದುಕೊಳ್ಳಲಿದೆ ಎಂದರು.

ರಾಜ್ಯ ಸರ್ಕಾರದಿಂದ 39 ಮಳಿಗೆಗಳು, ಜಿಲ್ಲಾ ಪಂಚಾಯತ್ ವತಿಯಿಂದ 30ಮಳಿಗೆಗಳು ತೆರೆದುಕೊಳ್ಳಲಿದ್ದು ಸಿದ್ಧತೆ ನಡೆದಿದೆ. ಸಾರ್ವಜನಿಕರಿಗೆ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿತ್ತು. ಅದರೆ ಈ ಬಾರಿ ಮಹಾತ್ಮಾ ಗಾಂಧಿ ರಸ್ತೆಯ ಪ್ರವೇಶ ದ್ವಾರದಲ್ಲೇ ವಾಹನ ನಿಲುಗಡೆಗೂ ಪ್ರವೇಶ ಕಲ್ಪಿಸಲಾಗಿದೆ ಎಂದರು.

Leave a Reply

comments

Related Articles

error: