ನಮ್ಮೂರುಮೈಸೂರು

ಜಿಲ್ಲೆಯಲ್ಲಿ ಮೂರು ದಿನ ಸಾಧಾರಣ ಮಳೆ ನಿರೀಕ್ಷೆ

ಮೈಸೂರಿನಲ್ಲಿ ದಸರಾ ಸಿದ್ಧತೆಗಳು ಭರ್ಜರಿಯಾಗಿಯೇ ನಡೆದಿದ್ದು ಜಿಲ್ಲೆಯಲ್ಲಿ ಇನ್ನು ಮೂರುದಿಗಳ ಕಾಲ ಸಾಧಾರಣ ಮಳೆಯಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

ನಾಗನಹಳ್ಳಿ ಸಂಶೋಧನಾ ಕೇಂದ್ರವು ಸೆಪ್ಟೆಂಬರ್ 28ರಿಂದ 30ರವರೆಗೆ ಪಾರಂಪರಿಕ ನಗರಿಯಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ. ಇಂದಿನ ಉಷ್ಣಾಂಶ 28-29ಡಿಗ್ರಿ ಸೆಲ್ಶಿಯಸ್ ಮತ್ತು ರಾತ್ರಿಯ ವೇಳೆ 20-21ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಕಂಡುಬರಲಿದೆ.

ಬೆಳಗಿನ ವೇಳೆ 97ಪರ್ಸೆಂಟ್ ತೇವಾಂಶ ಕಂಡುಬಂದಿದ್ದು, ಮಧ್ಯಾಹ್ನದ ಬಳಿಕ 59-69 ಪರ್ಸೆಂಟ್ ತೇವಾಂಶವನ್ನು ನಿರೀಕ್ಷಿಸಬಹುದಾಗಿದೆ. ಗಾಳಿಯ ವೇಗ ಗಂಟೆಗೆ 4-7ಕಿ.ಮೀ. ಸೆಪ್ಟೆಂಬರ್ 28ಮತ್ತು 29ರಂದು ಗರಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಶಿಯಸ್ ಮತ್ತು 29ಮತ್ತು 30ರಂದು ಗರಿಷ್ಠ 21ಡಿಗ್ರಿ ಸೆಲ್ಶಿಯಸ್  ಕಂಡುಬರಲಿದೆ.

ರೈತರಿಗೆ ಸಲಹೆ

ಭತ್ತದ ಫೈರನ್ನು ಬೆಳೆಯುವ ರೈತರು ಕ್ಲೋರೋಪೈರಿಪಸ್ ನ್ನು 20EC /2ಎಂ.ಎಲ್ ನ್ನು ಸಿಂಪಡಿಸಿದರೆ ರೆಕ್ಕೆಹುಳುಗಳ ಕಾಟ ತಪ್ಪಿಸಬಹುದು. ಮೂರು ದಿನ ಮಳೆ ನೀರೀಕ್ಷೆ ಇರುವುದರಿಂದ ರೈತರ ರಾಗಿ, ಜೋಳ, ಅವರೆ ಮೊದಲಾದ ಕೃಷಿಗಳಿಗೆ ಅನುಕೂಲ. ಮೈಸೂರಿನ ಎನ್ ಜಿಓ ಸಹಜ ಸಮೃಧ್ಧಿಯಲ್ಲಿ ಬೀಜಗಳನ್ನು ಖರೀದಿಸಬಹುದು.

Leave a Reply

comments

Related Articles

error: